ಸಾಮಾನ್ಯವಾಗಿ ಎಲ್ಲರಲ್ಲೂ ಸ್ನಾಯು ನೋವು ಕಂಡುಬರುತ್ತದೆ. ಒತ್ತಡ, ಅತಿಯಾದ ಬಳಲಿಕೆ ಮತ್ತು ಸಣ್ಣಪುಟ್ಟ ಗಾಯಗಳಿಂದ ಇದು ಉಂಟಾಗುತ್ತದೆ. ಈ ನೋವನ್ನು ನಿವಾರಿಸಲು ಈ ಸರಳವಾದ ಮನೆಮದ್ದನ್ನು ಬಳಸಿ.
ಬಾಳೆಹಣ್ಣು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದೆ ಇದೆ. ಈ ಬಾಳೆಹಣ್ಣಿನಿಂದ ಸ್ನಾಯು ನೋವನ್ನು ಕೂಡ ನಿವಾರಿಸಬಹುದು. ದೇಹದಲ್ಲಿ ಕಡಿಮೆ ಮಟ್ಟದ ಪೊಟ್ಯಾಶಿಯಂನಿಂದಾಗಿ ಸ್ನಾಯುಗಳ ನೋವು, ಆಯಾಸ, ಸೆಳೆತಕ್ಕೆ ಕಾರಣವಾಗುತ್ತದೆ.
ಬಾಳೆಹಣ್ಣಿನಲ್ಲಿ ಇದರಲ್ಲಿರುವ ಪೊಟ್ಯಾಶಿಯಂ ಸ್ನಾಯುಗಳನ್ನು ಸರಿಯಾಗಿ ಸಂಕುಚಿತಗೊಳಿಸಲು ಸಹಾಯ ಮಾಡುತ್ತದೆ. ಹಾಗಾಗಿ ಪ್ರತಿದಿನ ಮಾಗಿದ ಬಾಳೆಹಣ್ಣು ತಿಂದರೆ ನೋಯುತ್ತಿರುವ ಸ್ನಾಯುಗಳು ನಿವಾರಣೆಯಾಗುತ್ತದೆ.