ಕೋವಿಡ್-19 ಸೋಂಕಿಗೆ ಬೂಸ್ಟರ್ ಡೋಸ್ ನೀಡಲು ಬೇಡಿಕೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, 40 ವರ್ಷ ವಯಸ್ಸಿನ ಮೇಲ್ಪಟ್ಟ ಮಂದಿಗೆ ಬೂಸ್ಟರ್ ಲಸಿಕೆಗಳನ್ನು ಪರಿಗಣಿಸುವ ಸಾಧ್ಯತೆ ಇದೆ ಎಂದು ಭಾರತ ಜೀನೋಂ ವಿಜ್ಞಾನಿಗಳು ತಿಳಿಸಿದ್ದಾರೆ.
“ರಿಸ್ಕ್ನಲ್ಲಿದ್ದೂ ಲಸಿಕೆ ಪಡೆಯದ ಮಂದಿಗೆ ಲಸಿಕೆ ನೀಡುವುದು ಹಾಗೂ 40 ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ ಬೂಸ್ಟರ್ ಡೋಸ್ ನೀಡಲು ಪರಿಗಣಿಸುವುದು ಮತ್ತು ಮೊದಲಿಗೆ ಹೆಚ್ಚಿನ ರಿಸ್ಕ್ ಇರುವ ಮಂದಿಯನ್ನು ಪರಿಗಣಿಸಲಾಗುವುದು,” ಎಂದು ಭಾರತೀಯ ಸಾರ್ಸ್-ಕೋವ್-2 ಜೀನಾಮಿಕ್ಸ್ ಸೀಕ್ವೆನ್ಸಿಂಗ್ ಕನ್ಸಾರ್ಷಿಯಮ್ (ಇನ್ಸಾಕಾಗ್) ತನ್ನ ಸಾಪ್ತಾಹಿಕ ಬುಲೆಟಿನ್ನಲ್ಲಿ ತಿಳಿಸಿದೆ.
ಫೋನ್ ನಲ್ಲಿ ʼಆಧಾರ್ʼ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ…? ಇಲ್ಲಿದೆ ಡಿಟೇಲ್ಸ್
ಕೋವಿಡ್-19ನ ಜೀನಾಮಿಕ್ ಮಾರ್ಪಾಡುಗಳ ಮೇಲೆ ನಿಗಾ ಇಡಲೆಂದು ಭಾರತ ಸರ್ಕಾರ ಸ್ಥಾಪಿಸಿರುವ ಪ್ರಯೋಗಾಲಯಗಳ ಜಾಲವೇ ಈ ಇನ್ಸಾಕಾಗ್ ಆಗಿದೆ.
ದೇಶದಲ್ಲಿ ನೆಲೆಸಿರುವ ಸಾಂಕ್ರಾಮಿಕದ ಪರಿಸ್ಥಿತಿಯ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಯ ವೇಳೆ ಕೋವಿಡ್ ಲಸಿಕೆಗಳೊಂದಿಗೆ ಬೂಸ್ಟರ್ ಡೋಸ್ ನೀಡುವ ಸಲಹೆಗಳು ಕೇಳಿ ಬಂದಿವೆ.