ತಮ್ಮೊಟ್ಟಿಗೆ ಸೆಲ್ಫೀ ತೆಗೆದುಕೊಳ್ಳಲು ಮುಂದಾದ ವ್ಯಕ್ತಿಗಳನ್ನು ಕಂಡರೆ ಆಗದವರಂತೆ ಕಾಣುವ ಕೆಪಿಸಿಸಿ ಮುಖ್ಯಸ್ಥ ಹಾಗೂ ಮಾಜಿ ಸಚಿವ ಡಿ.ಕೆ. ಶಿವಕುಮಾರ್, ಇದೀಗ ಇಂಥದ್ದೇ ಸನ್ನಿವೇಶದಲ್ಲಿ ಮತ್ತೊಮ್ಮೆ ಸಿಲುಕಿಕೊಂಡಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್‌ನ ಟ್ರಬಲ್ ಶೂಟರ್ ಎಂದೇ ಕರೆಯಲ್ಪಡುವ ಡಿ.ಕೆ. ಶಿವಕುಮಾರ್, ಮಂಡ್ಯದ ಸಮಾರಂಭವೊಂದರಲ್ಲಿ ಭಾಗಿಯಾಗಿದ್ದ ವೇಳೆ ತಮ್ಮ ಪಕ್ಷದ ಕಾರ್ಯಕರ್ತರು ಸೆಲ್ಫೀ ತೆಗೆದುಕೊಳ್ಳಲು ಮುಂದಾದಾಗ ತಾಳ್ಮೆ ಕಳೆದುಕೊಂಡು ಆತನ ಮೊಬೈಲ್ ಕಸಿದುಕೊಂಡು ರೇಗುತ್ತಿರುವ ವಿಡಿಯೋ ವೈರಲ್ ಆಗಿದೆ.
ಆದಾಯ ತೆರಿಗೆ: ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖರಹಿತ ಮೇಲ್ಮನವಿ ನಿಯಮಗಳಲ್ಲಿ ಬದಲಾವಣೆ
ಈ ಕುರಿತು ಸ್ಪಷ್ಟೀಕರಣ ನೀಡಿದ ಡಿ.ಕೆ. ಶಿವಕುಮಾರ್, “ಯಾರ ಕೈಯಲ್ಲಿ ಏನಿರುತ್ತೆ ಎಂದು ನಮಗೆ ಹೇಳಲು ಬರುವುದಿಲ್ಲ. ರಾಜೀವ್ ಗಾಂಧಿಗೆ ಏನಾಯಿತು ಎಂಬುದು ನಿಮಗೆಲ್ಲಾ ಗೊತ್ತಿದೆ. ಕೆಲವೊಮ್ಮೆ ಮನೋಸಹಜವಾದ ಕೋಪ ಮತ್ತು ಭಾವನೆಗಳು ಆಚೆ ಬರುತ್ತವೆ, ಇದರಲ್ಲಿ ತಪ್ಪೇನಿಲ್ಲ,” ಎಂದು ಸಮರ್ಥಿಸಿಕೊಂಡಿದ್ದಾರೆ.
ಕಳೆದ ಜುಲೈನಲ್ಲಿ, ತಮ್ಮ ಹೆಗಲ ಮೇಲೆ ಕೈ ಇಡಲು ಬಂದ ಪಕ್ಷದ ಕಾರ್ಯಕರ್ತರೊಬ್ಬರಿಗೆ ಕಪಾಳ ಮೋಕ್ಷ ಮಾಡಿದ್ದ ಡಿಕೆಶಿ, 2018ರಲ್ಲಿ ಬಳ್ಳಾರಿಯಲ್ಲಿ ಚುನಾವಣಾ ಪ್ರಚಾರದ ವೇಳೆ ತಮ್ಮೊಟ್ಟಿಗೆ ಸೆಲ್ಫೀ ತೆಗೆದುಕೊಳ್ಳಲು ಬಂದಿದ್ದ ಮತ್ತೊಬ್ಬ ವ್ಯಕ್ತಿಗೂ ಹೀಗೇ ಮಾಡಿದ್ದರು.