ಉತ್ತರ ಪ್ರದೇಶದ ಕಾಂಗ್ರೆಸ್ ಎಂಎಲ್ಸಿ ಎಲ್ಪಿಜಿ ಸಿಲಿಂಡರ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಸರ್ಕಾರಿ ನಿವಾಸಕ್ಕೆ ಒಲೆಯನ್ನು ನೀಡುವಂತೆ ಕೇಳಿಕೊಂಡಿದ್ದಾರೆ.
ಕಾಂಗ್ರೆಸ್ ಎಂಎಲ್ಸಿ ದೀಪಕ್ ಸಿಂಗ್ ತಮಗೆ ಮನೆ ಮಂಜೂರು ಮಾಡಿರುವ ಉಸ್ತುವಾರಿ ಅಧಿಕಾರಿಗೆ ಈ ಬೇಡಿಕೆ ಪತ್ರವನ್ನು ರವಾನಿಸಿದ್ದಾರೆ. 2024ರವರೆಗೆ ಎಲ್ಪಿಜಿ ಸಿಲಿಂಡರ್ ದರ ಕಡಿಮೆಯಾಗುವ ಮಾತೇ ಇಲ್ಲ ಎಂದು ಅವರು ಹೇಳಿದ್ದಾರೆ.
ನನಗೆ ನೀಡಲಾಗಿರುವ ಅಪಾರ್ಟ್ಮೆಂಟ್ನಲ್ಲಿ ಒಲೆಯ ಸೌಕರ್ಯ ಇದೆಯೇ ಎಂದು ಖಚಿತಪಡಿಸಿಕೊಳ್ಳಿ. ಏಕೆಂದರೆ ಪ್ರಸ್ತುತ ಸಿಲಿಂಡರ್ ದರವನ್ನು ನೋಡಿದರೆ ಕಟ್ಟಿಗೆ ಹಾಗೂ ಕಲ್ಲಿದ್ದಲು ವ್ಯವಸ್ಥೆ ಮಾಡಿಕೊಳ್ಳುವುದೇ ಅಗ್ಗ ಎನಿಸಲಿದೆ.
975 ರೂಪಾಯಿ ಮೌಲ್ಯದ ಸಿಲಿಂಡರ್ನ್ನು ತಿಂಗಳಲ್ಲಿ 2 ಬಾರಿ ರೀಫಿಲ್ ಮಾಡಿಕೊಳ್ಳಬೇಕು. ಆದರೆ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡಿದಲ್ಲಿ ತಿಂಗಳಿಗೆ 500 ರೂಪಾಯಿ ಖರ್ಚು ಆಗಲಿದೆ ಎಂದು ಹೇಳಿದ್ದಾರೆ.
2024ಕ್ಕಿಂತಲೂ ಮೊದಲು ಸಿಲಿಂಡರ್ ದರ ಇಳಿಕೆ ಕಾಣುವುದು ಕನಸಿನ ಮಾತಾಗಿರುವುದರಿಂದ ನಾನಿರುವ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿರುವ ಬಹುತೇಕ ಶಾಸಕರು ಒಲೆ ವ್ಯವಸ್ಥೆಯನ್ನೇ ಬಯಸುತ್ತಿದ್ದಾರೆ ಎಂದು ದೀಪಕ್ ಸಿಂಗ್ ಹೇಳಿದ್ದಾರೆ.