ಭಾರತ ಹಾಗೂ ಚೀನಾ ನಡುವಿನ ಗಡಿ ವಿವಾದ ಸಂಬಂಧ ಕಾಂಗ್ರೆಸ್ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದೆ. ಡೋಕ್ಲಾಮ್ ಬಳಿಯಲ್ಲಿ ಚೀನಾ ಮೂರು ಗ್ರಾಮಗಳನ್ನು ಸ್ಥಾಪಿಸಿದೆ. ಆದರೆ ಮೋದಿ ಸರ್ಕಾರ ಮಾತ್ರ ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಲಜ್ಜೆಗೆಟ್ಟ ರೀತಿಯಲ್ಲಿ ರಾಜಿ ಮಾಡಿಕೊಂಡಿದೆ ಎಂದು ಆರೋಪ ಮಾಡಿದೆ. ಅಲ್ಲದೇ ಭಾರತದ ಗಡಿ ವಿಚಾರದಲ್ಲಿ ಪ್ರಧಾನಿ ಮೌನವನ್ನೂ ಕಾಂಗ್ರೆಸ್ ಟೀಕಿಸಿದೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗೌರವ್ ವಲ್ಲಭ್, ಚೀನಾದ ದಾಳಿ ಹಾಗೂ ಆಕ್ರಮಣವನ್ನು ಧೈರ್ಯದಿಂದ ಎದುರಿಸುವ ಸಾಮರ್ಥ್ಯವುಳ್ಳ ನಮ್ಮ ಸಶಸ್ತ್ರ ಪಡೆಯ ಶೌರ್ಯ ಹಾಗೂ ಧೈರ್ಯವನ್ನು ಪ್ರಧಾನಿ ಮತ್ತು ರಕ್ಷಣಾ ಪಡೆ ದುರ್ಬಲಗೊಳಿಸಿದ್ದಾರೆ ಎಂದು ಕಿಡಿಕಾರಿದ್ರು.
ಚೀನಾ ಆಕ್ರಮಣದ ವಿಚಾರದಲ್ಲಿ ಪರದೆಯ ಹಿಂದೆ ಅಡಗಿಕೊಳ್ಳಬೇಡಿ ಜನರಿಗೆ ಈ ವಿಚಾರವಾಗಿ ಪ್ರಧಾನಿಯನ್ನು ನಾವು ಒತ್ತಾಯಿಸುತ್ತೇವೆ ಎಂದು ಹೇಳಿದ್ರು.
ಚೀನಾದ ಮಿಲಿಟರಿ ಅಭಿವೃದ್ಧಿಯ ಉಪಗ್ರಹಗಳ ಚಿತ್ರಗಳು ಕಳೆದ ವರ್ಷ ಭೂತಾನ್ನಲ್ಲಿ ಚೀನಾ ಹಳ್ಳಿಗಳನ್ನು ನಿರ್ಮಾಣ ಮಾಡಿದ್ದನ್ನು ತೋರಿಸುತ್ತಿದೆ. ಸುಮಾರು 100 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಅನೇಕ ಹೊಸ ಮನೆಗಳು ನಿರ್ಮಾಣ ಮಾಡಿವೆ. ಈ ಗ್ರಾಮಗಳನ್ನು 2020ರ ಮೇ ತಿಂಗಳಿನಿಂದ 2021ರ ನವೆಂಬರ್ ತಿಂಗಳಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದ್ರು.
2017ರಲ್ಲಿ ಚೀನಾ ಹಾಗೂ ಭಾರತ ಮುಖಾಮುಖಿಗೊಂಡ ಪ್ರದೇಶವಾದ ಡೋಕ್ಲಾಮ್ನಲ್ಲಿಯೇ ಈ ಹಳ್ಳಿ ನಿರ್ಮಾಣವಾಗಿದೆ. ಭಾರತದ ಭೂ ಪ್ರದೇಶವನ್ನು ಚೀನಾ ಏಕೆ ಆಕ್ರಮಿಸಿಕೊಂಡಿದೆ..? ನಮ್ಮ ಭೂ ಪ್ರದೇಶವನ್ನು ಚೀನಾ ಹೇಗೆ ಆಕ್ರಮಿಸಿದೆ..? ಅರುಣಾಚಲ ಪ್ರದೇಶದಲ್ಲಿ ಚೀನಾದ ಗ್ರಾಮ ಹೇಗೆ ನಿರ್ಮಾಣವಾಗಿದೆ..? ಇದೆಲ್ಲದ್ದಕ್ಕೂ ಕೇಂದ್ರ ಸರ್ಕಾರ ಉತ್ತರ ನೀಡಬೇಕಿದೆ ಎಂದು ಗುಡುಗಿದ್ರು.