alex Certify BIG NEWS : ‘ಜೈನಮುನಿ’ ಹತ್ಯೆಗೆ ಖಂಡನೆ : ‘ಸುವರ್ಣ ವಿಧಾನಸೌಧ’ದ ಮುಂದೆ ಇಂದು ಪ್ರತಿಭಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ‘ಜೈನಮುನಿ’ ಹತ್ಯೆಗೆ ಖಂಡನೆ : ‘ಸುವರ್ಣ ವಿಧಾನಸೌಧ’ದ ಮುಂದೆ ಇಂದು ಪ್ರತಿಭಟನೆ

ಬೆಳಗಾವಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜೈನ ಸಮುದಾಯದ ಮುಖಂಡರು, ಜೈನ ಮುನಿಗಳು ಸುವರ್ಣ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ.

ಇಂದು ಬೆಳಗ್ಗೆ 11 ಗಂಟೆಗೆ ಸುವರ್ಣ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಯಲಿದ್ದು, ಹಲಗಾ ಗ್ರಾಮದ 108 ನೇ ಸಿದ್ದೇಶ್ವರ ಮಹಾರಾಜ ನೇತೃತ್ವದಲ್ಲಿ ಪ್ರೊಟೆಸ್ಟ್ ನಡೆಯಲಿದೆ. ಪ್ರತಿಭಟನೆಯಲ್ಲಿ 5 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಲಿದ್ದಾರೆ.

ಇನ್ನೂ ಇಂದು ಬೆಳಗ್ಗೆ 10.30 ಕ್ಕೆ ಹಿರೇಕೋಡಿಗೆ ಗ್ರಾಮದ ನಂದಿಪರ್ವತ ಆಶ್ರಮದ ಆವರಣದಲ್ಲಿ ಜೈನ ಸಂಪ್ರದಾಯದಂತೆ ಜೈನಮುನಿ ಸ್ವಾಮೀಜಿಗಳ ಅಂತ್ಯ ಸಂಸ್ಕಾರ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಹೆಚ್ಚಿನ ಪೊಲೀಸ್ ಭದ್ರತೆ ನೀಡಲಾಗಿದೆ.ಜೈನ ಮುನಿ ಹತ್ಯೆ ಪ್ರಕರಣ ಸಂಬಂಧ ರಾಯಬಾಗ ತಾಲೂಕಿನ ಕಾಟಕಬಾವಿ ಗ್ರಾಮದ ನಾರಾಯಣ ಮಾಳಿ, ಹಸನ್ ಡಾಲಾಯತ್ ಎಂಬುವರನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಾಗಿ 4 ಗಂಟೆಗೊಳಗಾಗಿ ಇಬ್ಬರುಉ ಆರಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತಿದೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...