alex Certify ಬೆತ್ತಲಾದ ಯುವತಿ ವಿಡಿಯೋ ಕಾಲ್: ಅಶ್ಲೀಲ ದೃಶ್ಯ ಕಳಿಸಿ ಪೊಲೀಸ್ ಅಧಿಕಾರಿಗೇ ಬೆದರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆತ್ತಲಾದ ಯುವತಿ ವಿಡಿಯೋ ಕಾಲ್: ಅಶ್ಲೀಲ ದೃಶ್ಯ ಕಳಿಸಿ ಪೊಲೀಸ್ ಅಧಿಕಾರಿಗೇ ಬೆದರಿಕೆ

ಬೆಂಗಳೂರು: ಅಶ್ಲೀಲ ವಿಡಿಯೋ ಕಳುಹಿಸಿ ಪೋಲಿಸ್ ಅಧಿಕಾರಿಗೆ ಬ್ಲಾಕ್ ಮೇಲ್ ಮಾಡಿದ ಘಟನೆ ನಡೆದಿದ್ದು, ಕೇಂದ್ರ ವಿಭಾಗದ ಸಿಇಎನ್ ಠಾಣೆಗೆ ಎಸಿಪಿ ದೂರು ನೀಡಿದ್ದಾರೆ.

ವಿಐಪಿ ಸೆಕ್ಯೂರಿಟಿ ಎಸಿಪಿಗೆ ನಗ್ನಳಾದ ಯುವತಿ ವಿಡಿಯೋ ಕಾಲ್ ಮಾಡಿ ನಂತರ ಬ್ಲಾಕ್ಮೇಲ್ ಮಾಡಿದ್ದಾಳೆ. ವಾಟ್ಸಾಪ್ ಮೂಲಕ ಮೆಸೇಜ್ ಕಳುಹಿಸಿದ್ದ ವಂಚಕರು ಮೊಬೈಲ್ ಸಂಖ್ಯೆ ಇದ್ದ ವಾಟ್ಸಾಪ್ ಡಿಸ್ಪ್ಲೇ ಇಮೇಜ್ ಗೆ ಎಸಿಪಿ ಸಂಬಂಧಿಯ ಮುಖ ಹೋಲುವ ಫೋಟೋ ಹಾಕಿದ್ದರು.

ಹೀಗಾಗಿ ಎಸಿಪಿ ಕೂಡ ಮೆಸೇಜ್ ಗಳಿಗೆ ರಿಪ್ಲೈ ಮಾಡಿದ್ದಾರೆ. ನಿರಂತರವಾಗಿ ಅಶ್ಲೀಲ ಸಂದೇಶಗಳನ್ನು ವಂಚಕರು ಕಳುಹಿಸಿದ್ದು, ನಂತರ ವಿಡಿಯೋ ಕಾಲ್ ಮಾಡಿದ್ದಾರೆ. ಎಸಿಪಿ ವಿಡಿಯೋ ಕರೆ ಸ್ವೀಕರಿಸಿದಾಗ ಯುವತಿಯೊಬ್ಬಳು ಬೆತ್ತಲಾಗಿ ನಗ್ನದೇಹ ಪ್ರದರ್ಶಿಸಿದ್ದು, ಎಸಿಪಿ ಕೂಡಲೇ ಕಾಲ್ ಕಟ್ ಮಾಡಿದ್ದಾರೆ. ನಂತರ ವಂಚಕರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಡುವುದಾಗಿ ಅಧಿಕಾರಿಗೆ ಬೆದರಿಕೆ ಹಾಕಿದ್ದಾರೆ. ಎಸಿಪಿ ಈ ಕುರಿತಾಗಿ ಕೇಂದ್ರ ವಿಭಾಗ ಸಿಇಎನ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...