alex Certify ನಾಣ್ಯದಲ್ಲಿ ನೌಕರನಿಗೆ ಸಂಬಳ ಪಾವತಿಸಿ ಪರ್ಮಿಟ್‌ ಕಳೆದುಕೊಂಡ ಕಂಪನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಣ್ಯದಲ್ಲಿ ನೌಕರನಿಗೆ ಸಂಬಳ ಪಾವತಿಸಿ ಪರ್ಮಿಟ್‌ ಕಳೆದುಕೊಂಡ ಕಂಪನಿ

ಫಿಲಿಪ್ಪೀನ್ಸ್‌ನ ಕಂಪನಿಯೊಂದು ತನ್ನ ಉದ್ಯೋಗಿಯೊಬ್ಬರ ಸಂಬಳವನ್ನು ಬರೀ ನಾಣ್ಯಗಳಲ್ಲೇ ಪಾವತಿ ಮಾಡಿದೆ.

ಇಲ್ಲಿನ ನೆಕ್ಸ್‌ಗ್ರೀನ್ ಎಂಟರ್‌ಪ್ರೈಸಸ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ರಸೆಲ್ ಮನೋಸಾ ತಮ್ಮ ಎರಡು ದಿನಗಳ ಸಂಬಳವನ್ನು ನಾಣ್ಯಗಳಲ್ಲೇ ಪಡೆದಿದ್ದಾರೆ. ಕಸ ಮರುಸಂಸ್ಕರಣೆಯ ಕೆಲಸ ಮಾಡುವ ಇವರ ಸಂಬಳವಾಗಿ ಡಜ಼ನ್‌ಗಟ್ಟಲೇ ಪ್ಲಾಸ್ಟಿಕ್‌ ಬ್ಯಾಗುಗಳಲ್ಲಿ ನಾಣ್ಯಗಳನ್ನು ಕೊಡಲಾಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಅಸಮಾಧಾನ ಕೇಳಿ ಬಂದು ಮೇಯರ್‌‌ರ ಸಮ್ಮುಖದಲ್ಲಿ ರಸೆಲ್ ಹಾಗೂ ಆತನ ಕಂಪನಿಯ ಪ್ರತಿನಿಧಿಯೊಬ್ಬರು ವರ್ಚುವಲ್ ಮೀಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ. ಈ ಮೀಟಿಂಗ್‌ ಅನ್ನು ವೆಲೆಂಜ಼ುಯೆಲಾ ನಗರಾಡಳಿತದ ಫೇಸ್ಬುಕ್ ಪೇಜ್‌ನಲ್ಲಿ ನೇರ ಸ್ಟ್ರೀಮಿಂಗ್ ಮಾಡಲಾಗಿದೆ. ಇದೇ ವೇಳೆ ಈ ಮೀಟಿಂಗ್ ಅನ್ನು ಸ್ಥಳೀಯ ಮಾಧ್ಯಮಗಳಲ್ಲಿ ನೇರ ಪ್ರಸಾರ ಸಹ ಮಾಡಲಾಗಿದೆ.

‘ಪರ್ಫ್ಯೂಮ್’ ಪರಿಮಳ ದಿನವಿಡೀ ಇರಲು ಇಲ್ಲಿದೆ ಸಿಂಪಲ್ ಟ್ರಿಕ್

“ನಿಮ್ಮ ನೌಕರನಿಗೇಕೆ ಐದು ಹಾಗೂ ಹತ್ತು ಸೆಂಟ್‌ಗಳಲ್ಲಿ ಸಂಬಳ ಕೊಟ್ಟಿದ್ದೀರಿ ? ಇದು ಬಹಳ ಅವಮಾನಕಾರಿಯಾಗಿದ್ದು, ಕಾರ್ಮಿಕನ ಘನತೆಗೆ ಚ್ಯುತಿ ತಂದಂತೆ” ಎಂದು ಮೇಯರ್‌ ಕೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಕಂಪನಿಯ ಪ್ರತಿನಿಧಿ ಜಾಸ್ಪರ್‌ ಚೆಂಗ್, ಈ ನಾಣ್ಯಗಳನ್ನು ರಸೆಲ್‌ಗೆ ಕೊಡಬೇಕೆಂದು ಇಟ್ಟಿರಲಿಲ್ಲ, ಏನೋ ತಪ್ಪಾಗಿ ಹಾಗೆ ಆಗಿದೆ ಎಂದಿದ್ದಾರೆ.

ನಮ್ಮದೇ ಸರ್ಕಾರವಿದ್ರೂ ಪ್ರಯೋಜನವಿಲ್ಲ, ಚಪ್ಪಡಿ ಕಲ್ಲಿನ ಸ್ಥಿತಿ ನಮ್ಮದು: ಸಿ.ಪಿ. ಯೋಗೇಶ್ವರ್

ಆದರೆ ಈ ಉತ್ತರದಿಂದ ಸಮಾಧಾನಗೊಳ್ಳದ ರಸೆಲ್, ಕಂಪನಿಯು ತನ್ನ ನೌಕರರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಕಾರಣದಿಂದ ತನಗೆ ಹೀಗೆ ಸಂಬಳ ಕೊಡಲಾಗಿದೆ ಎಂದು ತಿಳಿಸಿದ್ದಾರೆ.

ಘಟನೆಯ ತನಿಖೆ ನಡೆಸಲು ಆದೇಶ ನೀಡಿರುವ ಫಿಲಿಪ್ಪೀನ್ಸ್‌ನ ಕಾರ್ಮಿಕ ಕಾರ್ಯದರ್ಶಿ ಸಿಲ್ವೆಸ್ಟ್ರೆ ಬೆಲ್ಲೋ III, ಕಾರ್ಖಾನೆಯ ಮಾಲೀಕನ ವಿರುದ್ಧ ಆರೋಪಪಟ್ಟಿ ಸಿದ್ಧಪಡಿಸಬೇಕೆಂದು ತಿಳಿಸಿದ್ದಾರೆ.

ತನಿಖೆ ಪ್ರಗತಿಯ ಹಂತದಲ್ಲಿದ್ದು, ಕಂಪನಿಯ ಬ್ಯುಸಿನೆಸ್ ಪರ್ಮಿಟ್‌ ಅನ್ನು ರದ್ದು ಮಾಡಲಾಗಿದೆ. ಸರ್ಕಾರೀ ನೀತಿಗಳನ್ನು ಸಮರ್ಪಕವಾಗಿ ಪಾಲಿಸುವವರೆಗೂ ಕಾರ್ಖಾನೆ ಬಂದ್ ಮಾಡಲು ಆದೇಶಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...