ವಿಮಾನದಲ್ಲಿ ಹಾವಿನ ಮರಿ ಕಂಡು ಬರುವ ಕೆಲವೊಂದು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಕಂಡಿದ್ದೇವೆ. ಮೊದಲೇ ವಿಮಾನದಲ್ಲಿ ಹಾರಾಡಲು ಭಯ ಪಡುವ ಕೆಲವು ಮಂದಿಗೆ ಇಂಥ ಅನುಭವವಾಗಿಬಿಟ್ಟರೆ ಹೇಗಾಬೇಡ..?
ವಿಮಾನದಲ್ಲಿ ಹಾವಿನ ಮರಿಯೊಂದು ಕಾಣಿಸಿಕೊಂಡ ವಿಡಿಯೋವೊಂದು ವೈರಲ್ ಆಗಿದೆ. ಟ್ವಿಟರ್ನಲ್ಲಿ ಪೈಲಟ್ ಹನಾ ಮೋಃಸಿನ್ ಖಾನ್ ಈ ವಿಡಿಯೋ ಶೇರ್ ಮಾಡಿದ್ದಾರೆ. ಈ ಪುಟ್ಟ ವಿಡಿಯೋದಲ್ಲಿ ವಿಮಾನದ ಬೆಳಗುತ್ತಿರುವ ಜಾಗವೊಂದರಲ್ಲಿ ಈ ವಿಡಿಯೋ ಸೆರೆ ಹಿಡಿಯಲಾಗಿದೆ.
ದೀಪಿಕಾ ಚಿತ್ರದಲ್ಲಿ ಕಾಣಿಸಿಕೊಂಡ ಸಹೋದರಿ ಅನಿಶಾ…!
ಮಲೇಷ್ಯಾದ ಕ್ವಾಲಾ ಲಂಪುರದಿಂದ ತವಾವೂನತ್ತ ಹೊರಟಿದ್ದ ಏರ್ ಏಷ್ಯಾದ ಏರ್ಬಸ್ ಎ320-200ನಲ್ಲಿ ಹೀಗೆ ಆಗಿದೆ. ಪ್ರಯಾಣಿಕರ ಲಗೇಜ್ನಿಂದ ಈ ಹಾವು ಜಿಗಿದಿದೆ ಅಥವಾ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ವೇಳೆ ಈ ಹಾವು ಹೀಗೆ ಬಂದಿರಬಹುದು ಎನ್ನಲಾಗಿದೆ.