
ಸಾಮಾನ್ಯವಾಗಿ ವಿವಾಹಕ್ಕೆ ಯಾರಿಗೆಲ್ಲಾ ಕರೆಯಬೇಕು ಅಂತಾ ಪಟ್ಟಿ ಮಾಡೋದು ಸಾಮಾನ್ಯ. ಹಾಗೆಯೇ ಕುಟುಂಬ ಸಮೇತರಾಗಿ ಬಂದು ವಧು-ವರರನ್ನು ಆಶೀರ್ವದಿಸಿ ಅಂತೆಲ್ಲಾ ಮದುವೆ ಕರೆಯೋಲೆಯಲ್ಲಿ ಬರೆಯಲಾಗಿರುತ್ತದೆ. ಆದರೆ ಇಲ್ಲೊಂದೆಡೆ ಮದುವೆಗೆ ಬರಬೇಕಾದರೆ ಅತಿಥಿಗಳಿಗೆ ಕೆಲವೊಂದು ವಿಚಿತ್ರ ನಿಯಮಗಳು ಹಾಗೂ ನಿರ್ಬಂಧಗಳನ್ನು ವಿಧಿಸಲಾಗಿದೆ.
ಹೌದು, ವಿವಾಹಕ್ಕೆ ಆಗಮಿಸುವ ಅತಿಥಿಗಳು ಏನು ಮಾಡಬೇಕು. ಏನು ಮಾಡಬಾರದು ಅಂತೆಲ್ಲಾ ಪಟ್ಟಿ ಮಾಡಿ ಮೇಲ್ ಮಾಡಲಾಗಿದೆ. ಮದುವೆಯ ದಿನದಂದು ಅತಿಥಿಗಳು ತಮ್ಮ ಹಾಜರಾತಿಯನ್ನು ತಿಳಿಸಬೇಕಾಗಿ ಈ-ಮೇಲ್ ಮೂಲಕ ಕೋರಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಮದುವೆಗೆ ಹಾಜರಾಗುವವರು ಕೆಲವು ನಿಯಮ, ನಿಬಂಧನೆಗಳನ್ನು ಅನುಸರಿಸಬೇಕಾಗಿ ಕೇಳಿಕೊಂಡಿದ್ದಾರೆ.
ಕ್ರಿಮಿನಲ್ ಗೆ ಕೇಕ್ ತಿನಿಸಿದ ಪೊಲೀಸ್ ಅಧಿಕಾರಿ ವಿರುದ್ಧ ತನಿಖೆ
ಮೊದಲನೆಯದಾಗಿ ‘’ವಿವಾಹಕ್ಕೆ ಆಗಮಿಸುವವರು 15 ರಿಂದ 30 ನಿಮಿಷ ಬೇಗನೇ ಬರಬೇಕು. ಅಲ್ಲದೆ ಬಿಳಿ, ಕ್ರೀಮ್, ಬೂದು ಬಣ್ಣದ ಬಟ್ಟೆಗಳನ್ನು ಧರಿಸಿ ಬರಬೇಡಿ. ದಯವಿಟ್ಟು ತಲೆಗೂದಲನ್ನು ಬಾಬ್ ಕಟ್ ತರಹ ಅಥವಾ ಪೋಣಿಸಿ ಕಟ್ಟಿದರೆ ಮಾತ್ರ ವಿವಾಹಕ್ಕೆ ಹಾಜರಾಗಬೇಕು. ಮುಖಕ್ಕೆ ಮೇಕಪ್ ಹಚ್ಚಿಕೊಂಡು ಬರಬಾರದು. ಮದುವೆಯ ಕ್ಷಣಗಳನ್ನು ವಿಡಿಯೋ ಮಾಡಬಾರದು. ನಾವು ಸೂಚಿಸುವವರೆಗೂ ಫೇಸ್ ಬುಕ್ ಓಪನ್ ಮಾಡಬಾರದು’’ ಎಂದೆಲ್ಲಾ ನಿಬಂಧನೆ ವಿಧಿಸಿದ್ದಾರೆ.
ಎಡಬಿಡದೆ ಸುರಿದ ಮಳೆಗೆ ಮಾಯಾನಗರಿಯ ರಸ್ತೆಗಳು ಜಲಾವೃತ
ಇನ್ನೂ ಮುಂದುವರಿದು ‘’ಚಿತ್ರಗಳನ್ನು ಪೋಸ್ಟ್ ಮಾಡಬೇಕಾದರೆ ಹ್ಯಾಶ್ ಟ್ಯಾಗ್ ಉಪಯೋಗಿಸಿ ಪೋಸ್ಟ್ ಮಾಡಬೇಕು. ವಧುವಿನ ಜತೆ ಯಾರೂ ಕೂಡ ಮಾತನಾಡಬಾರದು. ಕೊನೆಯದಾಗಿ ಮದುವೆಗೆ ಆಗಮಿಸುವವರು $75 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಉಡುಗೊರೆಗಳನ್ನು ತರಬೇಕು’’ ಎಂದು ತಮ್ಮ ನಿಬಂಧನೆಗಳನ್ನು ತಿಳಿಸಿದ್ದಾರೆ.
ಸದ್ಯ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಅಲ್ಲದೆ ನೆಟ್ಟಿಗರು ಈ ಮದುವೆಗೆ ಬಹಿಷ್ಕಾರ ಹಾಕಿದ್ದಾರೆ.
ಇತ್ತೀಚೆಗಷ್ಟೇ ಅಮೆರಿಕಾದಲ್ಲಿ ವಿವಾಹಕ್ಕೆಂದು ತೆರಳಿದ್ದ ಅತಿಥಿಗಳು ಪಾತ್ರೆ ತೊಳೆದು ಬಂದಂತಹ ಘಟನೆ ನಡೆದಿತ್ತು. ಅಲ್ಲದೆ ಅತಿಥಿಗಳಿಗೆ ಸರಿಯಾಗಿ ಊಟವೂ ಸಿಕ್ಕಿರಲಿಲ್ಲ. ಬಂದವರನ್ನು ಅಡುಗೆ ಮನೆಗೆ ಕರೆದೊಯ್ದು ಪಾತ್ರೆ ತೊಳೆಯಲು ಹೇಳಿದ್ದರು ಅಂತಾ ನೊಂದ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
