ಮುಂಬೈ ಮಹಾನಗರ ಪೊಲೀಸರ ಟ್ವೀಟ್ ಖಾತೆಯನ್ನು ಒಮ್ಮೆ ಹೊಕ್ಕರೆ, ಇಷ್ಟಪಡದೆಯೇ ಮರಳಿ ಬಂದವರೇ ಇಲ್ಲ. ಅಷ್ಟು ಕ್ರಿಯಾಶೀಲತೆಯನ್ನು ತುಂಬಿದ ಸಂದೇಶಗಳನ್ನು ನಿವಾಸಿಗರಿಗೆ ಅವರು ಕೊಡುತ್ತಾರೆ.
ಈ ಬಾರಿ ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಮಾಸ್ಕ್ ಧರಿಸಿಕೊಂಡು ಎಚ್ಚರಿಕೆ ಕಾಯ್ದುಕೊಳ್ಳುವಂತೆ ಪೊಲೀಸರು ಮಾಡಿರುವ ಕೋಟ್ಸ್ ಮಾದರಿಯ ಟ್ವೀಟ್‍ಗಳು ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯವಾಗಿವೆ.
ಆಟೋರಿಕ್ಷಾ ಹಿಂಬರಹದ ಥೀಂ ಬಳಸಿ ಮುಂಬೈ ಪೊಲೀಸರಿಂದ ಕೋವಿಡ್ ಜಾಗೃತಿ
ಮುಂಬೈ ಪ್ಲೀಸ್ ಟೇಕ್ ‘ಖರ್'(ನಗರದ ಪ್ರದೇಶದ ಹೆಸರು) ಮತ್ತು ವ್ಯಾಕ್ಸಿನ್ ‘ಗೇಟ್‍ವೇ’ ಟು ಎ ಸೇಫರ್ ‘ಇಂಡಿಯಾ’ (ಗೇಟ್ ವೇ ಆಫ್ ಇಂಡಿಯಾ ಸ್ಮಾರಕ ಸಂದೇಶದಲ್ಲಿ ಅಡಕವಾಗಿದೆ). ಅದೇ ರೀತಿ, ಮಾಸ್ಕ್ ಈಸ್ ‘ಬೆಸ್ಟ್’ (ಮುಂಬೈ ನಗರ ಸಾರಿಗೆಯ ಈ ಹೆಸರು ಜನರ ನಾಲಿಗೆ ತುದ್ದಿಯಲ್ಲಿದೆ) ಮತ್ತು ಲೆಟ್ಸ್ ಕೀಪ್ ಸೇಫ್ಟಿ ‘ಆ್ಯನ್‍ಟಾಪ್’ (ಪ್ರದೇಶದ ಹೆಸರು) ಆಫ್ ಅವರ್ ಪ್ರಿಯಾರಿಟಿ ಲಿಸ್ಟ್. ಈ ತರಹದ ಕೋಟ್ಸ್ ಗಳನ್ನು ಟ್ವೀಟ್ ಮಾಡಿ, ಅದರಲ್ಲಿ ಕೊರೊನಾ ಮುನ್ನೆಚ್ಚರಿಕೆಯ ಸಂದೇಶವನ್ನು ಸೇರಿಸಿರುವ ಪೊಲೀಸರ ಕ್ರಿಯೇಟಿವಿಟಿಗೆ ಸಲಾಂ ಎನ್ನುತ್ತಿದ್ದಾರೆ ಮುಂಬೈಕರ್ಸ್.
https://twitter.com/MumbaiPolice/status/1432910075656429573?ref_src=twsrc%5Etfw%7Ctwcamp%5Etweetembed%7Ctwterm%5E1432910075656429573%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fcome-sep-mumbai-polices-creative-juices-overflow%2F806425