alex Certify ಪಾಠ ಮಾಡಬೇಕಾದ ಉಪನ್ಯಾಸಕನಿಂದ ಸೆಕ್ಸ್​ ರಾಕೆಟ್​ ದಂಧೆ: ವಿದ್ಯಾರ್ಥಿನಿ ಪ್ರಜ್ಞೆ ತಪ್ಪಿಸಿ ನಿರಂತರ ಅತ್ಯಾಚಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಠ ಮಾಡಬೇಕಾದ ಉಪನ್ಯಾಸಕನಿಂದ ಸೆಕ್ಸ್​ ರಾಕೆಟ್​ ದಂಧೆ: ವಿದ್ಯಾರ್ಥಿನಿ ಪ್ರಜ್ಞೆ ತಪ್ಪಿಸಿ ನಿರಂತರ ಅತ್ಯಾಚಾರ

ಗಣಿತ ಉಪನ್ಯಾಸಕರೊಬ್ಬರು ಸೆಕ್ಸ್​ ರಾಕೆಟ್​ನಲ್ಲಿ ಸಕ್ರಿಯರಾಗಿದ್ದು ತನ್ನೊಡನೆ ಮಲಗು ಎಂದು ನನ್ನನ್ನು ಪೀಡಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಪಿಲಿಭಿತ್​ನಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಆರೋಪ ಮಾಡಿದ್ದಾಳೆ. ಉಪನ್ಯಾಸಕ ತಲೆಮರೆಸಿಕೊಂಡಿದ್ದು ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಸ್ನೇಹಿತರ ಜೊತೆಯಲ್ಲಿ ಉಪನ್ಯಾಸಕನ ಮನೆಗೆ ಹೋದ ಬಳಿಕ ನನ್ನ ಮೇಲೆ ಆತ ತಿಂಗಳುಗಟ್ಟಲೇ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಪ್ರಜ್ಞೆ ಹೋಗುವಂತಹ ಪದಾರ್ಥಗಳನ್ನು ಸೇವಿಸಲು ನೀಡಿ ಕೆಲವೊಮ್ಮೆ ಉಪನ್ಯಾಸಕ ಹಾಗೂ ಇನ್ನು ಕೆಲವೊಮ್ಮೆ ಬೇರೆಯವರ ಜೊತೆಯಲ್ಲಿ ಲೈಂಗಿಕ ಕ್ರಿಯೆ ನಡೆಸುವಂತೆ ಮಾಡುತ್ತಿದ್ದ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ.

ಪಿಲಿಭಿತ್​​ ಎಸ್ಪಿಯನ್ನು ಭೇಟಿಯಾದ ವಿದ್ಯಾರ್ಥಿನಿ ಗಣಿತ ಉಪನ್ಯಾಸಕನ ವಿರುದ್ಧ ದೂರು ನೀಡಿದ್ದಾಳೆ. ಸದ್ಯ ಕಣ್ಮರೆಯಾಗಿರುವ ಉಪನ್ಯಾಸಕನ ವಿರುದ್ಧ ಸೆಕ್ಷನ್​ 294, 376 ಹಾಗೂ 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ವಿದ್ಯಾರ್ಥಿನಿಯು ನೀಡಿರುವ ಮಾಹಿತಿಯ ಪ್ರಕಾರ ಆರೋಪಿ ಉಪನ್ಯಾಸಕನು ಕಾಲೇಜಿನ ಆಡಳಿತ ಮಂಡಳಿಯ ಜೊತೆ ಉತ್ತಮ ಸಂಬಂಧ ಹೊಂದಿದ್ದ ಹಾಗೂ ಆತನ ಮನೆಯಲ್ಲಿ ಸೆಕ್ಸ್​ ಟಾಯ್ಸ್​ ಇದ್ದವು ಎಂದು ತಿಳಿದು ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...