alex Certify ನಿರ್ದಿಷ್ಟ ಅಂಗಡಿಯಿಂದ ಪುಸ್ತಕ – ಸಮವಸ್ತ್ರ ಖರೀದಿಸಲು ಒತ್ತಡ; ಖಾಸಗಿ ಶಾಲೆ ವಿರುದ್ಧ ಎಫ್ಐಆರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿರ್ದಿಷ್ಟ ಅಂಗಡಿಯಿಂದ ಪುಸ್ತಕ – ಸಮವಸ್ತ್ರ ಖರೀದಿಸಲು ಒತ್ತಡ; ಖಾಸಗಿ ಶಾಲೆ ವಿರುದ್ಧ ಎಫ್ಐಆರ್

ನಿರ್ದಿಷ್ಟ ಅಂಗಡಿಯಿಂದ ಪುಸ್ತಕಗಳು ಮತ್ತು ಸಮವಸ್ತ್ರಗಳನ್ನು ಖರೀದಿಸುವಂತೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಒತ್ತಡ ಹೇರಿದ ಆರೋಪದ ಮೇಲೆ ಮಧ್ಯಪ್ರದೇಶದಲ್ಲಿ ಖಾಸಗಿ ಶಾಲೆಯೊಂದರ ವಿರುದ್ಧ ದೂರು ದಾಖಲಾಗಿದೆ. ಅಯೋಧ್ಯನಗರದ ಖಾಸಗಿ ಶಾಲೆಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಭೋಪಾಲ್ ಕಲೆಕ್ಟರ್ ಆಶೀಶ್ ಸಿಂಗ್ ಅವರ ನಿರ್ದೇಶನದ ಮೇರೆಗೆ ಸಿಆರ್‌ಪಿಸಿಯ ಸೆಕ್ಷನ್ 144 ರ ಉಲ್ಲಂಘನೆಗಾಗಿ ಎಫ್‌ಐಆರ್ ದಾಖಲಿಸಲಾಗಿದೆ.

ಅಯೋಧ್ಯಾ ನಗರ ಮೂಲದ ಶಾಲೆಯ ನಿರ್ದೇಶಕರ ವಿರುದ್ಧ ಪೊಲೀಸ್ ಕ್ರಮಕ್ಕೆ ಸಂಬಂಧಿಸಿದ ಮಾಹಿತಿಯನ್ನು ಭೋಪಾಲ್ ಕಲೆಕ್ಟರ್ ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಹಂಚಿಕೊಳ್ಳಲಾಗಿದೆ.

ಕಲೆಕ್ಟರ್ ಆಶೀಶ್ ಸಿಂಗ್ ಎಲ್ಲಾ SDM ಗಳು ಮತ್ತು ಜಿಲ್ಲಾ ಶಿಕ್ಷಣ ಅಧಿಕಾರಿ (DEO) ಗೆ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.

ಇದರ ಅಡಿಯಲ್ಲಿ ಯಾವುದೇ ಶಿಕ್ಷಣ ಸಂಸ್ಥೆ ಅಥವಾ ಶಾಲೆಯು ಯಾವುದೇ ನಿರ್ದಿಷ್ಟ ಅಂಗಡಿಯಿಂದ ಪುಸ್ತಕಗಳು, ಸಮವಸ್ತ್ರಗಳು ಮತ್ತು ಲೇಖನ ಸಾಮಗ್ರಿಗಳನ್ನು ಖರೀದಿಸಲು ವಿದ್ಯಾರ್ಥಿಗಳನ್ನು ಒತ್ತಾಯಿಸುವಂತಿಲ್ಲ.

ಯಾವುದೇ ಶಾಲೆ/ಸಂಸ್ಥೆಯ ವಿರುದ್ಧ ಯಾವುದೇ ರೀತಿಯ ದೂರು ಬಂದರೆ ಅದರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಸೂಚನಾ ಫಲಕಗಳಲ್ಲಿ ತರಗತಿವಾರು ಪುಸ್ತಕ ಪಟ್ಟಿಗಳನ್ನು ಪ್ರದರ್ಶಿಸುವಂತೆ ಶಾಲಾ ಆಡಳಿತ ಮಂಡಳಿಗಳಿಗೆ ಸೂಚಿಸಲಾಗಿದೆ.

— Collector Bhopal (@CollectorBhopal) April 11, 2023

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...