alex Certify ಈ ಕೆಲಸಗಳಿಗೂ ಬಳಕೆಯಾಗುತ್ತೆ ತೆಂಗಿನೆಣ್ಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕೆಲಸಗಳಿಗೂ ಬಳಕೆಯಾಗುತ್ತೆ ತೆಂಗಿನೆಣ್ಣೆ

ತೆಂಗಿನೆಣ್ಣೆ ಆರೋಗ್ಯಕ್ಕೆ ತುಂಬಾ ಉತ್ತಮ. ಅಲ್ಲದೇ ಇದನ್ನು ಬಳಸುವುದರಿಂದ ಕೂದಲು ಮತ್ತು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಈ ತೆಂಗಿನೆಣ್ಣೆಯನ್ನು ಆರೋಗ್ಯ, ಸೌಂದರ್ಯಕ್ಕಾಗಿ ಮಾತ್ರವಲ್ಲದೇ ಇತರ ಕೆಲಸಗಳಿಗೂ ಬಳಸಬಹುದು. ಅದು ಯಾವುದೆಂಬುದನ್ನು ತಿಳಿದುಕೊಳ್ಳಿ.

* ಮೇಕಪ್ ಮಾಡಲು ಬ್ರಶ್ ಗಳನ್ನು ಬಳಸುತ್ತೇವೆ. ಆದರೆ ಇದರಲ್ಲಿ ಕೊಳಕು ಕುಳಿತುಕೊಳ್ಳುವುದರಿಂದ ಇದನ್ನು ಆಗಾಗ ಸ್ವಚ್ಛಗೊಳಿಸಬೇಕು. ಅದಕ್ಕಾಗಿ ತೆಂಗಿನೆಣ್ಣೆ ಬಳಸಬಹುದು. ತೆಂಗಿನೆಣ್ಣೆಗೆ ಸ್ವಲ್ಪ ನಿಂಬೆ ಎಸೆನ್ಷಿಯಲ್ ಆಯಿಲ್ ನ್ನು ಮಿಕ್ಸ್ ಮಾಡಿ ಬ್ರಶ್ ಗಳನ್ನು ಅದ್ದಿ ಚೆನ್ನಾಗಿ ಉಜ್ಜಿದರೆ ಕೊಳಕು ನಿವಾರಣೆಯಾಗುತ್ತದೆ.

* ಲೆದರ್ ಬೂಟು, ಬ್ಯಾಗ್ ಗಳನ್ನು ಸ್ವಚ್ಛಗೊಳಿಸಲು ತೆಂಗಿನೆಣ್ಣೆ ಬಳಸಬಹುದು. ಇದರಿಂದ ಲೆದರ್ ವಸ್ತುಗಳು ಹೊಳೆಯುತ್ತವೆ ಮತ್ತು ಹೆಚ್ಚು ಕಾಲ ಬಾಳಿಕೆ ಬರುತ್ತದೆ.

* ಸ್ಟೇನ್ ಲೆಸ್ ಸ್ಟೀಲ್ ಗಳನ್ನು ಸ್ವಚ್ಛ ಮಾಡಲು ತೆಂಗಿನೆಣ್ಣೆಯನ್ನು ಬಳಸಿ. ಇದರಿಂದ ಅದರ ಹೊಳಪು ಹೆಚ್ಚಾಗುತ್ತದೆ.

* ಪಾತ್ರೆಗಳಲ್ಲಿ ತುಕ್ಕು ಹಿಡಿಯುವುದನ್ನು ತಡೆಗಟ್ಟಲು ತೆಂಗಿನೆಣ್ಣೆ ಬಳಸಬಹುದು. ಪಾತ್ರೆಗಳಿಗೆ ತೆಂಗಿನೆಣ್ಣೆ ಹಚ್ಚಿ 1 ಗಂಟೆ ಬಿಟ್ಟು ಬಟ್ಟೆಯಿಂದ ಸ್ವಚ್ಛ ಮಾಡಿದರೆ ತುಕ್ಕು ನಿವಾರಣೆಯಾಗುತ್ತದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...