alex Certify Asian Games 2023 : ಏಷ್ಯನ್ ಗೇಮ್ಸ್ ನಲ್ಲಿ ಪದಕ ಗೆದ್ದ ಕನ್ನಡಿಗರಿಗೆ ಸಿಎಂ ಸಿದ್ದರಾಮಯ್ಯ ಸನ್ಮಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Asian Games 2023 : ಏಷ್ಯನ್ ಗೇಮ್ಸ್ ನಲ್ಲಿ ಪದಕ ಗೆದ್ದ ಕನ್ನಡಿಗರಿಗೆ ಸಿಎಂ ಸಿದ್ದರಾಮಯ್ಯ ಸನ್ಮಾನ

ಬೆಂಗಳೂರು : ಚೀನಾದ ಹಾಂಗ್ ಝೋ ನಲ್ಲಿ ಇತ್ತೀಚೆಗೆ ನಡೆದ 19 ನೇ ಏಷ್ಯಾಡ್ ಕ್ರೀಡಾ ಕೂಟದಲ್ಲಿ 107 ಪದಕ ಗಳಿಸಿ ಕೀರ್ತಿ ಪತಾಕೆ ಹಾರಿಸಿದ ಕ್ರೀಡಾಪಟುಗಳಿಗೆ ಸರ್ಕಾರದ ವತಿಯಿಂದ ಸನ್ಮಾನ ಮಾಡಲಾಯಿತು.

ಹೌದು. ಏಷ್ಯನ್ ಗೇಮ್ಸ್ ನಲ್ಲಿ ಪದಕ ಗೆದ್ದ ಕನ್ನಡಿಗರಿಗೆ ಸಿಎಂ ಸಿದ್ದರಾಮಯ್ಯ ಸನ್ಮಾನಿಸಿದ್ದಾರೆ. ಏಷ್ಯನ್ ಗೇಮ್ಸ್ ನಲ್ಲಿ ರಾಜ್ಯದ ಒಟ್ಟು 8 ಕ್ರೀಡಾಪಟುಗಳು ಪದಕ ಪಡೆದಿದ್ದರು. ಕ್ರೀಡಾಪಟುಗಳಿಗೆ ಗೃಹ ಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸನ್ಮಾನ ಮಾಡಿದರು . ಏಷ್ಯನ್ ಗೇಮ್ಸ್ನಲ್ಲಿ ಪದಕ ಗೆದ್ದ ಕರ್ನಾಟಕದ ಕ್ರೀಡಾಪಟುಗಳಿಗೆ ಹಾಗೂ ತರಬೇತಿದಾರರಿಗೆ ರಾಜ್ಯ ಸರ್ಕಾರ ನಗದು ಪುರಸ್ಕಾರ ನೀಡಿ ಗೌರವಿಸಿದೆ.

ಏಷಿಯನ್ ಗೇಮ್ಸ್ ನಲ್ಲಿ ರಾಜ್ಯದ ಒಟ್ಟು 8 ಕ್ರೀಡಾಪಟುಗಳು ಪದಕ ಪಡೆದಿದ್ದರು. ರಾಜ್ಯದ 4 ಕ್ರೀಡಾಪಟುಗಳು ಚಿನ್ನ ಪಡೆದಿದ್ದರೆ, 4 ಕ್ರೀಡಾಪಟು ಬೆಳ್ಳಿ ಪದಕ ಪಡೆದಿದ್ದರು. ಭಾರತ ಈ ಬಾರಿ ಏಷ್ಯನ್ ಗೇಮ್ಸ್ ನಲ್ಲಿ ಒಟ್ಟು 107 ಪದಕ ಮುಡಿಗೇರಿಸಿಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...