ಆಡಿಯೋ ನೋಟ್ಗಳ ಮೂಲಕ ಸಂವಹನ ನಡೆಸಬಹುದಾದ ಕ್ಲಬ್ ಹೌಸ್ ಅಪ್ಲಿಕೇಶನ್ ಸದ್ಯ ಟ್ರೆಂಡಿಂಗ್ನಲ್ಲಿದೆ. ಇದೀಗ ಈ ಅಪ್ಲಿಕೇಶನ್ನಲ್ಲಿ ಇದೀಗ ಹೊಸ ಸೌಲಭ್ಯವನ್ನ ಪರಿಚಯಿಸಲಿದ್ದು, ಇದರ ಸಹಾಯದಿಂದ ಬಳಕೆದಾರರು ಟೆಕ್ಸ್ಟ್ ಮೆಸೇಜ್ಗಳನ್ನ ಮಾಡಬಹುದಾಗಿದೆ ಎಂದು ಹೇಳಿದೆ.
ಈ ನೋಟಿಫಿಕೇಶನ್ನ ಸ್ಕ್ರೀನ್ಶಾಟ್ನ್ನು ಬಳಕೆದಾರರೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಆದರೆ ಇಲ್ಲಿಯವರೆಗೆ ಈ ಸೌಲಭ್ಯ ಅಧಿಕೃತವಾಗಿ ಜಾರಿಗೆ ಬಂದಿಲ್ಲ.
ಕ್ಲಬ್ ಹೌಸ್ನ ಅನೇಕ ಬಳಕೆದಾರರು ಟ್ವಿಟರ್ನಲ್ಲಿ ಸ್ಕ್ರೀನ್ ಶಾಟ್ನ್ನು ಶೇರ್ ಮಾಡಿದ್ದಾರೆ. ಈ ನೋಟಿಫಿಕೇಶನ್ನ ಪ್ರಕಾರ ರೂಮ್ನಲ್ಲಿ ಸದಸ್ಯರು ಸಂದೇಶಗಳನ್ನ ಕಳುಹಿಸುವ ಮೂಲಕವೂ ಸಂವಹನ ನಡೆಸಬಹುದಾಗಿದೆ ಎಂದು ಹೇಳಲಾಗಿದೆ.
ಕ್ಲಬ್ ಹೌಸ್ ಇನ್ವೈಟ್ ಓನ್ಲಿ ಅಪ್ಲಿಕೇಶನ್ ಆಗಿದ್ದು ನೀವು ನೇರವಾಗಿ ಈ ಅಪ್ಲಿಕೇಶನ್ ಒಳಕ್ಕೆ ಪ್ರವೇಶಿಸಲು ಸಾಧ್ಯವಿಲ್ಲ. ಇಲ್ಲಿ ನೀವು ಆಡಿಯೋ ಚಾಟ್ಗಳ ಮೂಲಕ ರೂಂನ ಸದಸ್ಯರ ಜೊತೆ ಯಾವುದಾದರೂ ವಿಚಾರದ ಬಗ್ಗೆ ಚರ್ಚೆ ನಡೆಸಬಹುದಾಗಿದೆ. ಇತ್ತೀಚಿಗೆ 1 ಮಿಲಿಯನ್ ಡೌನ್ಲೋಡ್ ಹೊಂದುವ ಮೂಲಕ ಈ ಅಪ್ಲಿಕೇಶನ್ ಸದ್ದು ಮಾಡಿತ್ತು.