alex Certify ʼಕ್ಲಬ್​ ಹೌಸ್ʼ ಸದಸ್ಯರಿಗೆ ಇಲ್ಲಿದೆ ಒಂದು ಗುಡ್‌ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕ್ಲಬ್​ ಹೌಸ್ʼ ಸದಸ್ಯರಿಗೆ ಇಲ್ಲಿದೆ ಒಂದು ಗುಡ್‌ ನ್ಯೂಸ್

ಆಡಿಯೋ ನೋಟ್​ಗಳ ಮೂಲಕ ಸಂವಹನ ನಡೆಸಬಹುದಾದ ಕ್ಲಬ್​ ಹೌಸ್​ ಅಪ್ಲಿಕೇಶನ್​ ಸದ್ಯ ಟ್ರೆಂಡಿಂಗ್​ನಲ್ಲಿದೆ. ಇದೀಗ ಈ ಅಪ್ಲಿಕೇಶನ್​​ನಲ್ಲಿ ಇದೀಗ ಹೊಸ ಸೌಲಭ್ಯವನ್ನ ಪರಿಚಯಿಸಲಿದ್ದು, ಇದರ ಸಹಾಯದಿಂದ ಬಳಕೆದಾರರು ಟೆಕ್ಸ್ಟ್​ ಮೆಸೇಜ್​ಗಳನ್ನ ಮಾಡಬಹುದಾಗಿದೆ ಎಂದು ಹೇಳಿದೆ.

ಈ ನೋಟಿಫಿಕೇಶನ್​ನ ಸ್ಕ್ರೀನ್​ಶಾಟ್​ನ್ನು ಬಳಕೆದಾರರೊಬ್ಬರು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ. ಆದರೆ ಇಲ್ಲಿಯವರೆಗೆ ಈ ಸೌಲಭ್ಯ ಅಧಿಕೃತವಾಗಿ ಜಾರಿಗೆ ಬಂದಿಲ್ಲ.

ಕ್ಲಬ್​​ ಹೌಸ್​ನ ಅನೇಕ ಬಳಕೆದಾರರು ಟ್ವಿಟರ್​ನಲ್ಲಿ ಸ್ಕ್ರೀನ್​ ಶಾಟ್​ನ್ನು ಶೇರ್​ ಮಾಡಿದ್ದಾರೆ. ಈ ನೋಟಿಫಿಕೇಶನ್​ನ ಪ್ರಕಾರ ರೂಮ್​ನಲ್ಲಿ ಸದಸ್ಯರು ಸಂದೇಶಗಳನ್ನ ಕಳುಹಿಸುವ ಮೂಲಕವೂ ಸಂವಹನ ನಡೆಸಬಹುದಾಗಿದೆ ಎಂದು ಹೇಳಲಾಗಿದೆ.

ಕ್ಲಬ್​ ಹೌಸ್​ ಇನ್ವೈಟ್​ ಓನ್ಲಿ ಅಪ್ಲಿಕೇಶನ್​ ಆಗಿದ್ದು ನೀವು ನೇರವಾಗಿ ಈ ಅಪ್ಲಿಕೇಶನ್​ ಒಳಕ್ಕೆ ಪ್ರವೇಶಿಸಲು ಸಾಧ್ಯವಿಲ್ಲ. ಇಲ್ಲಿ ನೀವು ಆಡಿಯೋ ಚಾಟ್​ಗಳ ಮೂಲಕ ರೂಂನ ಸದಸ್ಯರ ಜೊತೆ ಯಾವುದಾದರೂ ವಿಚಾರದ ಬಗ್ಗೆ ಚರ್ಚೆ ನಡೆಸಬಹುದಾಗಿದೆ. ಇತ್ತೀಚಿಗೆ 1 ಮಿಲಿಯನ್​ ಡೌನ್​ಲೋಡ್​ ಹೊಂದುವ ಮೂಲಕ ಈ ಅಪ್ಲಿಕೇಶನ್​ ಸದ್ದು ಮಾಡಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...