
ರಣವೀರ್ ಸಿಂಗ್ ಬೆತ್ತಲಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ಮತ್ತು ವಿರೋಧದ ಅಭಿಪ್ರಾಯಗಳು ಬರುತ್ತಿವೆ. ಕೆಲವು ಜನರಂತೂ ರಣವೀರ್ಗೆ ಬಿಸಿ ಮುಟ್ಟಿಸಲು ಅಭಿಯಾನವೇ ನಡೆಸಿದ್ದಾರೆ. ವಿಡಿಯೋ ವೊಂದರಲ್ಲಿ ಕಾಣಿಸುವಂತೆ ಇಂದೋರ್ನಲ್ಲಿ ರಣವೀರ್ಗಾಗಿ ಜನರ ಗುಂಪು ಬಟ್ಟೆ ದೇಣಿಗೆ ಅಭಿಯಾನವನ್ನು ಆಯೋಜಿಸಿದೆ.
ಬೀದಿಯಲ್ಲಿರುವ ಮೇಜಿನ ಮೇಲೆ ಇರಿಸಲಾಗಿರುವ ಪೆಟ್ಟಿಗೆಗೆ ಜನರು ತಮ್ಮ ಬಟ್ಟೆಗಳನ್ನು ದಾನ ಮಾಡುವುದನ್ನು ನೋಡಬಹುದಾಗಿದೆ. ಆ ಬಾಕ್ಸ್ ಮೇಲೆ ರಣವೀರ್ನ ಫೋಟೋಶೂಟ್ ಫೋಟೋ ಇದೆ.
ಈ ಬಾಲಿವುಡ್ ನಟನ ನಗ್ನ ಫೋಟೋಶೂಟ್ನ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಮುಂಬೈ ಪೊಲೀಸರು “ಮಹಿಳೆಯರ ಭಾವನೆಗಳಿಗೆ ಧಕ್ಕೆ ತಂದ” ಆರೋಪದ ಮೇಲೆ ಆತನ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.