alex Certify 15 ಮಂದಿ ಖಾತೆಗೆ ತಲಾ 10 ಲಕ್ಷ ರೂ. ಜಮಾ ಮಾಡಿದ SBI: ಮೋದಿ ಹಣ ಹಾಕಿದ್ದಾರೆಂದು ಸಾಲ ತೀರಿಸಿದ ಭೂಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

15 ಮಂದಿ ಖಾತೆಗೆ ತಲಾ 10 ಲಕ್ಷ ರೂ. ಜಮಾ ಮಾಡಿದ SBI: ಮೋದಿ ಹಣ ಹಾಕಿದ್ದಾರೆಂದು ಸಾಲ ತೀರಿಸಿದ ಭೂಪ

ಕೆಲಸದ ವೇಳೆ ಎಷ್ಟೆಲ್ಲಾ ನಿಗಾ ವಹಿಸಿದರೂ ಹೇಗೆಲ್ಲಾ ಎಡವಟ್ಟುಗಳಾಗುತ್ತವೆ. ಇಂತಹ ಕೆಲವು ತಪ್ಪುಗಳು ದೊಡ್ಡ ಸಮಸ್ಯೆ ಉಂಟುಮಾಡುತ್ತವೆ ಎಂಬುದಕ್ಕೆ ಮತ್ತೊಂದು ನಿದರ್ಶನ ಇಲ್ಲಿದೆ. ಎಸ್‌.ಬಿ.ಐ. ಸಿಬ್ಬಂದಿ ಕ್ಲೆರಿಕಲ್ ದೋಷದಿಂದ 1.5 ಕೋಟಿ ರೂ.ಗಳನ್ನು 15 ಉದ್ಯೋಗಿಗಳ ಖಾತೆಗೆ ತಲಾ 10 ಲಕ್ಷ ರೂ.ನಂತೆ ತಪ್ಪು ವರ್ಗಾವಣೆಯಾಗಿದೆ.

ಎಸ್‌.ಬಿ.ಐ. ಬ್ಯಾಂಕ್ ಉದ್ಯೋಗಿಯೊಬ್ಬರು ಕ್ಲೆರಿಕಲ್ ದೋಷದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿಬ್ಬಂದಿಯ ತಪ್ಪಿನಿಂದಾಗಿ ತೆಲಂಗಾಣ ಸರ್ಕಾರದ ಪ್ರಮುಖ ಕಾರ್ಯಕ್ರಮವಾದ ದಲಿತ ಬಂಧು ಯೋಜನೆಗಾಗಿ ಇರಿಸಲಾಗಿದ್ದ ಹಣವನ್ನು ದುರುಪಯೋಗಪಡಿಸಿಕೊಂಡಂತಾಗಿದೆ.

ವಿಶೇಷ ಯೋಜನೆಯಡಿ ಪ್ರತಿ ಎಸ್‌.ಸಿ. ಕುಟುಂಬಕ್ಕೆ 10 ಲಕ್ಷ ರೂ.ನಂತೆ ಒಂದು ಬಾರಿ ಬಂಡವಾಳದ ಸಹಾಯವನ್ನು ಒದಗಿಸಲಾಗುವುದು. ಎಸ್.ಬಿ.ಐ. ಸಿಬ್ಬಂದಿ ತಪ್ಪಿನಿಂದಾಗಿ ಲೋಟಸ್ ಆಸ್ಪತ್ರೆಯ 15 ಉದ್ಯೋಗಿಗಳ(ವೇತನ) ಖಾತೆಗಳಿಗೆ ಆಕಸ್ಮಿಕವಾಗಿ 1.50 ಕೋಟಿ ರೂ. ಜಮಾ ಆಗಿದೆ. ಪ್ರತಿಯೊಬ್ಬ ಉದ್ಯೋಗಿ ಖಾತೆಗೆ 10 ಲಕ್ಷ ರೂ. ವರ್ಗಾವಣೆಯಾಗಿದ್ದು, ಇದರ ಬೆನ್ನಲ್ಲೇ ‘ಆಕಸ್ಮಿಕ’ ಫಲಾನುಭವಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಎಸ್‌.ಬಿ.ಐ. ರಂಗಾರೆಡ್ಡಿ ಜಿಲ್ಲಾ ಕಲೆಕ್ಟರೇಟ್ ಶಾಖೆಯ ಅಧಿಕಾರಿಗಳು ತಪ್ಪು ಜಮಾ ಮಾಡಿದ್ದು, ಗಮನಕ್ಕೆ ಬಂದ ತಕ್ಷಣ ಆಸ್ಪತ್ರೆಯ ನೌಕರರಿಗೆ ಮೊತ್ತವನ್ನು ಹಿಂತಿರುಗಿಸುವಂತೆ ಕೇಳಿಕೊಂಡಿದ್ದಾರೆ. 15 ಉದ್ಯೋಗಿಗಳಲ್ಲಿ 14 ಮಂದಿ ಹಣ ಹಿಂದಿರುಗಿಸಿದ್ದಾರೆ.

ಆದರೆ, ಮಹೇಶ್ ಎಂಬುವರು ಫೋನ್‌ ಗೆ ಸಿಗದ ಕಾರಣ ಅವರು ಹಣ ಹಿಂದಿರುಗಿಸಲು ಸಾಧ್ಯವಾಗಲಿಲ್ಲ. ಅಚ್ಚರಿಯೆಂದರೆ, 10 ಲಕ್ಷ ರೂಪಾಯಿಯನ್ನು ಪ್ರಧಾನಿ ನರೇಂದ್ರ ಮೋದಿ ತನ್ನ ಖಾತೆಗೆ ಜಮಾ ಮಾಡಿದ್ದಾರೆ ಎಂದು ಮಹೇಶ್ ತಿಳಿದುಕೊಂಡು ಸಾಲವನ್ನು ತೀರಿಸಲು ಹಣ ಬಳಸಿಕೊಂಡಿದ್ದಾನೆ. ಪದೇ ಪದೇ ಮನವಿ ಮಾಡಿದರೂ ಮಹೇಶ್ ಹಣವನ್ನು ಹಿಂದಿರುಗಿಸದ ಕಾರಣ ಆತನ ವಿರುದ್ಧ ಬ್ಯಾಂಕ್ ಅಧಿಕಾರಿ ದೂರು ದಾಖಲಿಸಿದ್ದಾರೆ.

ಬ್ಯಾಂಕ್ ಉದ್ಯೋಗಿ ಮಾಡಿದ ತಪ್ಪಿಗೆ ಯಾವುದೇ ದೂರು ದಾಖಲಾಗಿಲ್ಲ. ಮಹೇಶ್ ಅವರ ಖಾತೆಗೆ ವರ್ಗಾವಣೆಯಾದ 10 ಲಕ್ಷ ರೂ.ಗಳಲ್ಲಿ 6.70 ಲಕ್ಷ ರೂ.ಗಳನ್ನು ವಸೂಲಿ ಮಾಡುವಲ್ಲಿ ಬ್ಯಾಂಕ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಅವರು ಇನ್ನೂ 3.30 ಲಕ್ಷ ರೂ.ಗಳನ್ನು ಎಸ್‌.ಬಿ.ಐ.ಗೆ ಹಿಂದಿರುಗಿಸಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...