alex Certify ವಾಕರ್ ಬಳಸಿ ಪುಟ್ಟ ಹುಡುಗ ಹೊಡೆದ ಗೋಲ್ ​ಗೆ ಸಹಪಾಠಿಗಳ ಸಂಭ್ರಮ; ಭಾವುಕ ಕ್ಷಣದ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಕರ್ ಬಳಸಿ ಪುಟ್ಟ ಹುಡುಗ ಹೊಡೆದ ಗೋಲ್ ​ಗೆ ಸಹಪಾಠಿಗಳ ಸಂಭ್ರಮ; ಭಾವುಕ ಕ್ಷಣದ ವಿಡಿಯೋ ವೈರಲ್

ಓಡಾಡಲು ವಾಕರ್​ ಬಳಸುವ ವಿಶೇಷ ಸಾಮರ್ಥ್ಯದ ಹುಡುಗ ಸಾಕಷ್ಟು ಪ್ರಯತ್ನದಿಂದ ಗೋಲು ಹೊಡೆಯುವ ಹೃದಯ ಸ್ಪರ್ಶಿ ವಿಡಿಯೋ ಒಂದು ವೈರಲ್​ ಆಗಿದೆ. ಅವನು ಗೋಲು ಗಳಿಸಿದ ತಕ್ಷಣ, ಅವನ ಸ್ನೇಹಿತರು ಮತ್ತು ಸಹಪಾಠಿಗಳು ಸಂಭ್ರಮಿಸುವುದೂ ಸಹ ಮನಮುಟ್ಟುವಂತಿದೆ.

ಆತನಿಗೆ ಇದು ಅಮೂಲ್ಯ ಕ್ಷಣವೆನಿಸುತ್ತದೆ. ಅದನ್ನು ನೋಡಿದ ನಂತರ ನೋಡಿದವರಿಗೂ ಸಹ ಹೃದಯವು ಸಂತೋಷದಿಂದ ತುಂಬಿರುತ್ತದೆ. ಈ ವಿಡಿಯೋವನ್ನು ಐಪಿಎಸ್​ ಅಧಿಕಾರಿ ದೀಪಾಂಶು ಕಬ್ರಾ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊ ಸಾವಿರಾರು ಸಂಖ್ಯೆಯಲ್ಲಿ ವೀಕ್ಷಣೆ ಪಡೆದಿದೆ.

ʼಸಿಂಗಂʼ ಸ್ಟೈಲ್‌ ನಲ್ಲಿ ಮೀಸೆ ಬಿಟ್ಟಿದ್ದ ಪೊಲೀಸ್‌ ಸಿಬ್ಬಂದಿ ವಿರುದ್ದ ನ್ಯಾಯಾಧೀಶರು ಗರಂ

ಈಗ ವೈರಲ್​ ಆಗಿರುವ ವಿಡಿಯೊದಲ್ಲಿ, ವಿಶೇಷ ಸಾಮರ್ಥ್ಯವುಳ್ಳ ಹುಡುಗನು ವಾಕರ್​ ಅನ್ನು ಹಿಡಿದುಕೊಂಡು ಚೆಂಡನ್ನು ಗೋಲ್​ ಪೋಸ್ಟ್​ ಕಡೆಗೆ ಒದೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಅವನ ಶಾಲೆಯ ಸ್ನೇಹಿತರು ಅವನನ್ನು ಹುರಿದುಂಬಿಸುತ್ತಲೇ ಇರುತ್ತಾರೆ. ಅಂತಿಮವಾಗಿ, ಅವನು ಗುರಿಯನ್ನು ಹೊಡೆದಾಗ, ಅವನ ಸ್ನೇಹಿತರೆಲ್ಲರೂ ಸಂಭ್ರಮಿಸುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...