ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಇದೇ 11ರಂದು ಬೆಂಗಳೂರಿನಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಿದ ಬೆನ್ನಲ್ಲೇ ಬೆಂಗಳೂರಿನ ಬಾಲಕನೊಬ್ಬ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದಾನೆ. ಅದಕ್ಕೆ ಕಾರಣ, ಈತ ಕೊಳಲಿನಲ್ಲಿ ವಂದೇ ಮಾತರಂ ಟ್ಯೂನ್ ನುಡಿಸಿರುವುದು.
ಭಾರತೀಯ ರೈಲ್ವೆ ಖಾತೆಗಳ ಸೇವೆ ಅಧಿಕಾರಿ ಅನಂತ್ ರೂಪನಗುಡಿ ಅವರು ಟ್ವಿಟರ್ನಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡಿದ್ದು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ರೈಲು ಚಲಿಸುತ್ತಿರುವಾಗಲೇ ವಿದ್ಯಾರ್ಥಿ ಕೊಳಲು ನುಡಿಸಿದ್ದಾನೆ. ಅಪ್ರಮೇಯ ಶೇಷಾದ್ರಿ ಎಂಬ ದ್ವಿತೀಯ ಪಿಯುಸಿ ವಿದ್ಯಾರ್ಥಿ ಭಾರಿ ಶ್ಲಾಘನೆ ಗಳಿಸಿದ್ದಾನೆ.
ವಿಡಿಯೋ ಇದುವರೆಗೆ ಸುಮಾರು 4,900 ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈತನ ಈ ಪ್ರತಿಭೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಜತೆಗೆ, ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಒಳಭಾಗಕ್ಕೂ ಭಾರಿ ಶ್ಲಾಘನೆ ವ್ಯಕ್ತವಾಗಿದೆ.