ಬೆಂಗಳೂರು : ಶಕ್ತಿ ಯೋಜನೆ ಹಿನ್ನೆಲೆ ಸರ್ಕಾರಿ ಬಸ್ ಗಳು ತುಂಬಿ ತುಳುಕುತ್ತಿದ್ದು, ಕಂಡಕ್ಟರ್ ಗಳಿಗೆ ದೊಡ್ಡ ತಲೆನೋವಾಗಿದೆ.
ಬಸ್ ಹತ್ತಲು ಮಹಿಳೆಯರ ನೂಕಾಟ ನಡೆಸಿ ಕಂಡಕ್ಟರ್ ಬಡಿಗೆ ಹಿಡಿದು ಗದರಿದ ಘಟನೆ ಮುನಿರಾಬಾದ್ ನಲ್ಲಿ ನಡೆದಿದೆ.
ಇಲ್ಲಿನ ಹುಲಿಗಿರಿಯ ಹುಲಿಗೆಮ್ಮದೇವಿ ದರ್ಶನ ಪಡೆದು ಬಸ್ ಹತ್ತಲು ಮಹಿಳೆಯರು ಸೀಟಿಗಾಗಿ ನೂಕಾಟ-ತಳ್ಳಾಟ ಮಾಡಿದ್ದಾರೆ. ಬಸ್ ನಿಲ್ದಾಣಕ್ಕೆ ಬಸ್ ಬಂದು ನಿಲ್ಲುತ್ತಿದ್ದಂತೆ ಪ್ರಯಾಣಿಕರನ್ನು ಇಳಿಯುವುದಕ್ಕೆ ಕೂಡ ಸಹಕರಿಸದೇ ನಾ ಮುಂದು ತಾ ಮುಂದು ಎಂದು ಬಸ್ ಹತ್ತೋಕೆ ಮುಂದಾಗಿದ್ದಾರೆ. ಇದರಿಂದ ನೂಕು ನುಗ್ಗಲು ಶುರುವಾಗಿದ್ದು, ಕಂಡಕ್ಟರ್ ಮಾತಿಗೆ ಜಗ್ಗದೇ ಮಹಿಳೆಯರು ನೂಕಾಟ ಮುಂದುವರೆದಿದ್ದಾರೆ. ಆಗ ಕಂಡಕ್ಟರ್ ಬಡಿಗೆ ಹಿಡಿದು ಮಹಿಳೆಯರನ್ನು ಗದರಿಸಿದ್ದಾರೆ.