alex Certify Chrome ಬಳಕೆದಾರರಿಗೆ ಗೂಗಲ್‌ ನಿಂದ ಮಹತ್ವದ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Chrome ಬಳಕೆದಾರರಿಗೆ ಗೂಗಲ್‌ ನಿಂದ ಮಹತ್ವದ ಸೂಚನೆ

Chrome ಬ್ರೌಸರ್‌ ಬಳಕೆ ಮಾಡುತ್ತಿರುವವರಿಗೆ ಹ್ಯಾಕರ್‌ಗಳ ಕಾಟ ಶುರುವಾಗಿದೆ. ಹ್ಯಾಕಿಂಗ್‌ನಿಂದ ಪಾರಾಗಲು Chrome ಬ್ರೌಸರ್‌ನಲ್ಲಿ ಸೆಕ್ಯೂರಿಟಿ ಅಪ್ಡೇಟ್‌ ಮಾಡಿಕೊಳ್ಳುವಂತೆ ಬಳಕೆದಾರರಿಗೆ Google ಸೂಚಿಸಿದೆ.

ವಿಂಡೋಸ್, ಮ್ಯಾಕ್ ಮತ್ತು ಲಿನಕ್ಸ್‌ನಲ್ಲಿ ಗೂಗಲ್ ಕ್ರೋಮ್‌ ಬಳಸುತ್ತಿರುವವರು ಅದನ್ನು ಇತ್ತೀಚಿನ ಆವೃತ್ತಿಗೆ ನವೀಕರಿಸಬೇಕು. ಈ ಮೂಲಕ  ಹ್ಯಾಕರ್‌ಗಳು ಸಕ್ರಿಯವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿರುವ ನಿರ್ಣಾಯಕ ಸೆಕ್ಯೂರಿಟಿ ಲೋಪದಿಂದ ರಕ್ಷಿಸಿಕೊಳ್ಳಬೇಕು.

ಈ ಬಗ್ಗೆ ಗೂಗಲ್‌ ಬ್ಲಾಗ್‌ ಪೋಸ್ಟ್‌ನಲ್ಲಿ ಅಧಿಕೃತವಾಗಿ ಪ್ರಕಟ ಮಾಡಿದೆ. ಆಗಸ್ಟ್ 30 ರಂದು ಅನಾಮಧೇಯ ಟಿಪ್‌ಸ್ಟರ್ ಸಮಸ್ಯೆ ಆಗಿರುವುದಾಗಿ ವರದಿ ಮಾಡಿದ ನಂತರ ಇದನ್ನು ಶೀಘ್ರವೇ ಪರಿಹರಿಸುವುದಾಗಿ ಗೂಗಲ್‌ ಹೇಳಿದೆ. ದೋಷದ ಸ್ವರೂಪದ ಬಗ್ಗೆ ವಿಸ್ತ್ರತ ಮಾಹಿತಿ ಲಭ್ಯವಾಗಿಲ್ಲ. ಇದು ಮೋಜೋದಲ್ಲಿನ “ಸಾಕಷ್ಟು ಡೇಟಾ ಮೌಲ್ಯೀಕರಣ” ದೊಂದಿಗೆ ಸಂಬಂಧಿಸಿದೆ ಅಂತಾ ಹೇಳಲಾಗ್ತಿದೆ.

ಇದು ಕ್ರೋಮಿಯಂ ಬಳಸುವ ರನ್‌ಟೈಮ್ ಲೈಬ್ರರಿಗಳ ಸೆಟ್, ಗೂಗಲ್ ಕ್ರೋಮ್ ಆಧಾರಿತ ಕೋಡ್‌ಬೇಸ್ ಆಗಿದೆ. ಬಳಕೆದಾರರು ಕ್ರೋಮ್‌ ಅಪ್ಡೇಟ್‌ ಮೂಲಕ ಲಿಂಕ್‌ಗಳಿಗೆ ಹ್ಯಾಕರ್‌ಗಳ ಪ್ರವೇಶವನ್ನು ನಿರ್ಬಂಧಿಸಬಹುದು. ಅಪ್‌ಡೇಟ್‌ ಮಾಡಿದ್ರೆ ಕ್ರೋಮ್‌ನಲ್ಲಿರೋ ಲೋಪವನ್ನು ಹೇಗೆ ಬಳಸಿಕೊಳ್ಳುವುದು ಎಂಬುದನ್ನು ಕಂಡುಹಿಡಿಯಲು ಹ್ಯಾಕರ್‌ಗಳಿಗೆ ಕಷ್ಟವಾಗುತ್ತದೆ.

ಅಪ್ಡೇಟ್‌ ಅನ್ನು ಸಕ್ರಿಯಗೊಳಿಸಲು Chrome ಬಳಕೆದಾರರು ಬ್ರೌಸರ್ ಅನ್ನು ಮರುಪ್ರಾರಂಭಿಸಬೇಕು. Windows, Mac ಮತ್ತು Linux ಗಾಗಿ ಇದು Chrome ಅನ್ನು ಆವೃತ್ತಿ 105.0.5195.102ಗೆ ನವೀಕರಿಸುತ್ತದೆ. ನೀವು ಇತ್ತೀಚಿನ ಆವೃತ್ತಿಯನ್ನು ಬಳಸುತ್ತಿರುವಿರಿ ಎಂದು ಖಚಿತಪಡಿಸಿಕೊಳ್ಳಲು ನಿಮ್ಮ ಬ್ರೌಸರ್‌ನ ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳನ್ನು ಕ್ಲಿಕ್ ಮಾಡಿ. ಹೆಲ್ಪ್‌ ಮತ್ತು “ಅಬೌಟ್‌ Google Chrome ” ಗೆ ಕ್ಲಿಕ್‌ ಮಾಡುವ ಮೂಲಕ ನಿಮ್ಮ ಸಾಧನದಲ್ಲಿ Chrome ಇತ್ತೀಚಿನ ಆವೃತ್ತಿ ಇದೆಯೇ ಎಂಬುದನ್ನು ಪತ್ತೆ ಮಾಡಿಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...