ತನ್ನ ಯಶಸ್ಸಿಗೆ ಹಿಂದೂ ದೇವರೇ ಕಾರಣ ಎಂದು ನಂಬಿದ ಕ್ರಿಶ್ಚಿಯನ್ ಉದ್ಯಮಿ ಉಡುಪಿ ಜಿಲ್ಲೆಯ ತನ್ನ ತವರಾದ ಶಿರ್ವಾದಲ್ಲಿ ಗಣೇಶ ದೇವಾಲಯವನ್ನ ನಿರ್ಮಿಸಿದ್ದಾರೆ.
ಗೇಬ್ರಿಯಲ್ ಎಫ್ ನಜರೆತ್ ಎಂಬವರು ತಮ್ಮ ಪೂರ್ವಜರ ಭೂಮಿಯಲ್ಲಿ ದೇವಾಲಯವನ್ನ ನಿರ್ಮಿಸಿದ್ದಾರೆ.
10ನೇ ತರಗತಿ ವ್ಯಾಸಂಗ ಮುಗಿದ ಬಳಿಕ ಗೇಬ್ರಿಯಲ್ ಕೆಲಸಕ್ಕಾಗಿ ಮುಂಬೈಗೆ ತೆರಳಿದ್ದರು. ಇಲ್ಲಿ ಅವರು ಉದ್ಯಮವನ್ನ ಆರಂಭಿಸಿದ್ರು.
ಗೇಬ್ರಿಯಲ್ ಹಾಗೂ ಗಣಪತಿ ನಡುವಿನ ಬಾಂಧವ್ಯ 55 ವರ್ಷಕ್ಕೂ ಹಳೆಯದು. ಮುಂಬೈನಲ್ಲಿ ನೆಲೆಸಿದ್ದ ಗೇಬ್ರಿಯಲ್ ನಿತ್ಯವು ವಿನಾಯಕ ದೇಗುಲಕ್ಕೆ ನಮಿಸುತ್ತಿದ್ದರು, ದಶಕಗಳ ಬಳಿಕ ತವರಿಗೆ ವಾಪಸ್ಸಾಗಿರುವ ಅವರು ತಮ್ಮ ಸ್ವಂತ ಜಮೀನಿನಲ್ಲಿ ವಿನಾಯಕ ದೇಗುಲ ನಿರ್ಮಿಸಿದ್ದಾರೆ.
ಗೇಬ್ರಿಯಲ್ರ ಗಣಪತಿ ದೇವರ ಭಕ್ತಿ ಬಗ್ಗೆ ಮಾತನಾಡಿದ ಸ್ನೇಹಿತ ಪುಂಡಲಿಕ ಮರಾಠೆ, ಉಡುಪಿಯ ಅಮ್ಮಣ್ಣಿ ರಮಣ ಶೆಟ್ಟಿ ಮೆಮೋರಿಯಲ್ ಹಾಲ್ನಲ್ಲಿ ನಿರ್ಮಿಸಿದ್ದ ಗಣಪತಿ ದೇಗುಲವನ್ನ ಗೇಬ್ರಿಯಲ್ ಇಷ್ಟಪಟ್ಟಿದ್ದರು. ಅದೇ ರೀತಿ 36 ಇಂಚಿನ ಗಣೇಶ ಮೂರ್ತಿಯನ್ನ ಪ್ರತಿಷ್ಠಾಪನೆ ಮಾಡಿ ಧಾರ್ಮಿಕ ಕಾರ್ಯಗಳನ್ನ ನಡೆಸಲು ಹಾಲ್ನ್ನು ನಿರ್ಮಿಸಿದ್ದಾರೆ ಎಂದು ಹೇಳಿದ್ದಾರೆ.
ಕೊರೊನಾದಿಂದಾಗಿ ಗಣಪತಿ ದೇಗುಲ ಪ್ರತಿಷ್ಟಾಪನಾ ಕಾರ್ಯಕ್ರಮ ವಿಳಂಬವಾಯ್ತು. ಪ್ರತಿಷ್ಟ ಮಹೋತ್ಸವ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮವನ್ನ ಕಳೆದ ವಾರ ನಡೆಸಲಾಗಿದೆ. ಈ ದೇಗುಲಕ್ಕೆ ಪಾಲಿಮಾರು ಮಠದ ಶ್ರೀ ವಿದ್ಯಾದೀಶ ತೀರ್ಥ ಸ್ವಾಮೀಜಿಗಳು ಭೇಟಿ ನೀಡಿದ್ದಾರೆ.