alex Certify ಒಂದು ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಪುಟ್ಟ ಹುಡುಗಿಯ ಅದ್ಬುತ ಡಾನ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಪುಟ್ಟ ಹುಡುಗಿಯ ಅದ್ಬುತ ಡಾನ್ಸ್

ಸಿನಿಮಾ ನಟ- ನಟಿಯರಂತೆ ಡ್ರೆಸ್ ಮಾಡ್ಕೊಂಡು ಅವ್ರ ಸ್ಟೈಲ್ ನಲ್ಲೇ ಡಾನ್ಸ್ ಮಾಡೋದು ಇತ್ತೀಚೆಗೆ ಟ್ರೆಂಡ್ ಆಗಿದೆ. ಈ ಕಾರ್ಯದಲ್ಲಿ ದೊಡ್ಡವರಷ್ಟೇ ಅಲ್ಲ, ಪುಟ್ಟ ಮಕ್ಕಳು ಕೂಡ ಹಿಂದೆ ಬಿದ್ದಿಲ್ಲ. ಸ್ಟಾರ್ ದಂಪತಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರ ಬ್ರಹ್ಮಾಸ್ತ್ರದ ಕೇಸರಿಯಾ ಹಾಡು ಅನೇಕ ಅಭಿಮಾನಿಗಳನ್ನು ಗೆದ್ದಿದೆ.

ಸಿನಿಮಾಗಿಂತ ಈ ಹಾಡು ಸಖತ್ ಹಿಟ್ ಆಗಿದೆ. ಈ ಹಾಡಿಗೆ ಪುಟ್ಟ ಪೋರಿಯೊಬ್ಬಳು ಡ್ಯಾನ್ಸ್ ಮಾಡಿದ್ದು ವೈರಲ್ ಆಗಿದೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮನಗೆದ್ದಿದೆ.

ಕೇಸರಿಯಾ ಹಾಡಿಗೆ ಪುಟ್ಟ ಹುಡುಗಿಯ ಭಾವಪೂರ್ಣ ಅಭಿನಯ ಎಲ್ಲರ ಕಣ್ಮನ ಸೆಳೆಯುತ್ತದೆ. ವೀಡಿಯೊದಲ್ಲಿ, ಹುಡುಗಿ ಆಲಿಯಾ ಭಟ್ ಅವರ ಡ್ಯಾನ್ಸ್ ಸ್ಟೆಪ್ಸ್ ಅನ್ನು ಅನುಕರಿಸುತ್ತಾರೆ.

ತನ್ನ ನೃತ್ಯದ ಚಲನೆಗಳ ಜೊತೆಗೆ ಚಿಕ್ಕ ಹುಡುಗಿ ಆಲಿಯಾ ಹಾಡಿನಲ್ಲಿ ಧರಿಸುವಂತೆಯೇ ನೀಲಿ ಜೀನ್ಸ್ ಮತ್ತು ಕೆಂಪು ಶ್ರಗ್ನೊಂದಿಗೆ ಜೋಡಿಸಲಾದ ಬಿಳಿ ಟಿ-ಶರ್ಟ್ ಅನ್ನು ಧರಿಸಿದ್ದಾಳೆ. ಹಾಡು ಹಿನ್ನಲೆಯಲ್ಲಿ ಪ್ಲೇ ಆಗುತ್ತಿದ್ದಂತೆ ಅವಳು ಟಿವಿ ಮುಂದೆ ನಿಂತು ನೃತ್ಯ ಮಾಡಿದ್ದಾಳೆ. ವೀಡಿಯೊವನ್ನು 1 ಕೋಟಿಗೂ ಹೆಚ್ಚು ಜನ ವೀಕ್ಷಿಸಿದ್ದು ವೈರಲ್ ಆಗ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...