alex Certify ಚಾಪರ್​ ರೈಡ್​, ಅದ್ಧೂರಿ ಪಾರ್ಟಿ; ಹೈಫೈ ಲೈಫ್‌ಗಾಗಿ ಕೋಟಿ ಕೋಟಿ ಲಪಟಾಯಿಸಿದ ಬ್ಯಾಂಕ್​ ಸಿಬ್ಬಂದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಪರ್​ ರೈಡ್​, ಅದ್ಧೂರಿ ಪಾರ್ಟಿ; ಹೈಫೈ ಲೈಫ್‌ಗಾಗಿ ಕೋಟಿ ಕೋಟಿ ಲಪಟಾಯಿಸಿದ ಬ್ಯಾಂಕ್​ ಸಿಬ್ಬಂದಿ

ಬ್ಯಾಂಕ್​ ಹಣ ದುರುಪಯೋಗಪಡಿಸಿಕೊಂಡು ಚಾಪರ್​ ರೈಡ್​, ಅದ್ಧೂರಿ ಪಾರ್ಟಿಗಳು, ಚಲನಚಿತ್ರಕ್ಕೆ ಹೂಡಿಕೆ ಹೀಗೆ ಐಷಾರಾಮಿ ಜೀವನ ಕಳೆಯುತ್ತಿದ್ದ ಬ್ಯಾಂಕ್​ ಸಿಬ್ಬಂದಿಯ ಬಣ್ಣ ಬಯಲಾಗಿದೆ.

ಬಾಗಲಕೋಟೆಯಲ್ಲಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ನಲ್ಲಿ ಆತ ಕೇವಲ ಆಫೀಸ್​ ಅಟೆಂಡರ್​ ಆಗಿ ಕೆಲಸ ಮಾಡಿ ವರ್ಷಗಳಲ್ಲಿ ಕೋಟಿಗಟ್ಟಲೆ ವಂಚಿಸಿದ್ದಾನೆಂದು ಹೇಳಲಾಗುತ್ತಿದೆ. ಬ್ಯಾಂಕ್​ ಇನ್ನೂ ಪೊಲೀಸರಿಗೆ ದೂರು ನೀಡಿಲ್ಲ.

ಪ್ರವೀಣ್​ ಪತ್ರಿ ಎಂಬಾತ 2014ರಲ್ಲಿ ಬ್ಯಾಂಕ್​ಗೆ ಸೇರಿದ್ದು, ಬಾಗಲಕೋಟೆ ಜಿಲ್ಲೆಯ ಕಮತಗಿ, ಗುಡೂರು, ಅಮೀನಗಡ ಬ್ಯಾಂಕ್​ ಶಾಖೆಗಳಲ್ಲಿ ಅಟೆಂಡರ್​ ಆಗಿ ಕೆಲಸ ಮಾಡಿದ್ದಾನೆ.

ಮ್ಯಾನೇಜರ್​ಗಳ ಗುರುತಿನ ಚೀಟಿಗಳನ್ನು ನಕಲಿ ಪ್ರತಿಮಾಡಿ ಅವುಗಳನ್ನು ಬಳಸಿಕೊಂಡು ವಂಚನೆ ಮಾಡಿದ್ದಾನೆ ಎಂದು ಬಾಗಲಕೋಟೆ ಡಿಸಿಸಿ ಬ್ಯಾಂಕ್​ ಅಧ್ಯಕ್ಷರು ಖಚಿತಪಡಿಸಿದ್ದಾರೆ.

ಹುನಗುಂದ ತಾಲೂಕಿನ ಸೂಳಿಭಾವಿ ಗ್ರಾಮದವನಾದ ಈತ ತನ್ನನ್ನು ಜೂನಿಯರ್​ ರಘು ದೀಕ್ಷಿತ್ ಎಂದು ಪರಿಚಯಿಸಿಕೊಂಡಿದ್ದ. ಮೂಲಗಳ ಪ್ರಕಾರ, ಆತ ಖಾಸಗಿ ಹೆಲಿಕಾಪ್ಟರ್​ನಲ್ಲಿ ಅನೇಕ ಪ್ರವಾಸ ಕೈಗೊಂಡಿದ್ದಲ್ಲದೇ ಕೆಲವು ತಿಂಗಳ ಹಿಂದೆ ಗ್ರಾಮದ ಜಾತ್ರೆಗೆ ಹೆಲಿಕಾಪ್ಟರ್​ ಮೂಲಕ ಪುಷ್ಪಾರ್ಚನೆ-ಹೂವನ್ನು ಪ್ರಾಯೋಜಿಸಿದ್ದ. ಬಾಗಲಕೋಟೆಯಲ್ಲಿ ಅನೇಕ ಅದ್ಧೂರಿ ಪಾರ್ಟಿ ಆಯೋಜಿಸಿದ್ದ, ಹಲವಾರು ಮ್ಯೂಸಿಕ್​ ಆಲ್ಬಮ್​ಗಳು ಮತ್ತು ಚಲನಚಿತ್ರಗಳಿಗೆ ಹಣ ನೀಡಿದ್ದಾನೆ ಎಂದು ಹೇಳಲಾಗುತ್ತಿದೆ.

ಡಿಸಿಸಿ ಬ್ಯಾಂಕ್​ನ ಕಮತಗಿ ಶಾಖೆಯು 56 ಲಕ್ಷ ರೂಪಾಯಿ ನಾಪತ್ತೆಯಾಗಿದೆ ಎಂದು ಬ್ಯಾಂಕ್​ ಆಡಳಿತ ಮಂಡಳಿಯ ಆಂತರಿಕ ತನಿಖಾ ಸಮಿತಿಯ ಮುಂದೆ ತಪ್ಪೊಪ್ಪಿಕೊಂಡಿದೆ. ಈ ಪ್ರಕರಣದ ತನಿಖೆಗಾಗಿ ಬ್ಯಾಂಕ್​ ಮೂರು ವಿಶೇಷ ತಂಡಗಳನ್ನು ರಚಿಸಿದೆ.

ಸಮಿತಿಯು ಪತ್ರಿಯನ್ನು ಕರ್ತವ್ಯದಿಂದ ವಜಾಗೊಳಿಸಿದೆ ಮತ್ತು ಪಾಸ್​ ಪೋರ್ಟನ್ನು ಮುಟ್ಟುಗೋಲು ಹಾಕಿಕೊಂಡಿದೆ. ತನಿಖೆ ರ್ಪೂಣಗೊಳ್ಳುವವರೆಗೆ ಅಥವಾ ಆತನ ವಿರುದ್ಧ ಕ್ರಿಮಿನಲ್​ ಮೊಕದ್ದಮೆ ದಾಖಲಿಸುವವರೆಗೆ ತನಿಖೆಗೆ ಸಹಕರಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.

ಸೂಳಿಭಾವಿಯಲ್ಲಿ ಆತನ ಹಾಗೂ ತಾಯಿಯ ಹೆಸರಲ್ಲಿರುವ ಜಮೀನು, ನಿವೇಶನವನ್ನು ಜಪ್ತಿ ಮಾಡಲು ಬ್ಯಾಂಕ್​ ನಿರ್ಧರಿಸಿದೆ. ಹೀಗೆ ಮಾಡುವುದರಿಂದ ದುರುಪಯೋಗಪಡಿಸಿಕೊಂಡ ಹಣದ ಒಂದು ಭಾಗವಾದರೂ ಬರುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಡಿಸಿಸಿ ಬ್ಯಾಂಕ್​ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...