ಹುನಗುಂದ ತಾಲೂಕಿನ ಸೂಳಿಭಾವಿ ಗ್ರಾಮದವನಾದ ಈತ ತನ್ನನ್ನು ಜೂನಿಯರ್ ರಘು ದೀಕ್ಷಿತ್ ಎಂದು ಪರಿಚಯಿಸಿಕೊಂಡಿದ್ದ. ಮೂಲಗಳ ಪ್ರಕಾರ, ಆತ ಖಾಸಗಿ ಹೆಲಿಕಾಪ್ಟರ್ನಲ್ಲಿ ಅನೇಕ ಪ್ರವಾಸ ಕೈಗೊಂಡಿದ್ದಲ್ಲದೇ ಕೆಲವು ತಿಂಗಳ ಹಿಂದೆ ಗ್ರಾಮದ ಜಾತ್ರೆಗೆ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ-ಹೂವನ್ನು ಪ್ರಾಯೋಜಿಸಿದ್ದ. ಬಾಗಲಕೋಟೆಯಲ್ಲಿ ಅನೇಕ ಅದ್ಧೂರಿ ಪಾರ್ಟಿ ಆಯೋಜಿಸಿದ್ದ, ಹಲವಾರು ಮ್ಯೂಸಿಕ್ ಆಲ್ಬಮ್ಗಳು ಮತ್ತು ಚಲನಚಿತ್ರಗಳಿಗೆ ಹಣ ನೀಡಿದ್ದಾನೆ ಎಂದು ಹೇಳಲಾಗುತ್ತಿದೆ.
ಡಿಸಿಸಿ ಬ್ಯಾಂಕ್ನ ಕಮತಗಿ ಶಾಖೆಯು 56 ಲಕ್ಷ ರೂಪಾಯಿ ನಾಪತ್ತೆಯಾಗಿದೆ ಎಂದು ಬ್ಯಾಂಕ್ ಆಡಳಿತ ಮಂಡಳಿಯ ಆಂತರಿಕ ತನಿಖಾ ಸಮಿತಿಯ ಮುಂದೆ ತಪ್ಪೊಪ್ಪಿಕೊಂಡಿದೆ. ಈ ಪ್ರಕರಣದ ತನಿಖೆಗಾಗಿ ಬ್ಯಾಂಕ್ ಮೂರು ವಿಶೇಷ ತಂಡಗಳನ್ನು ರಚಿಸಿದೆ.
ಸಮಿತಿಯು ಪತ್ರಿಯನ್ನು ಕರ್ತವ್ಯದಿಂದ ವಜಾಗೊಳಿಸಿದೆ ಮತ್ತು ಪಾಸ್ ಪೋರ್ಟನ್ನು ಮುಟ್ಟುಗೋಲು ಹಾಕಿಕೊಂಡಿದೆ. ತನಿಖೆ ರ್ಪೂಣಗೊಳ್ಳುವವರೆಗೆ ಅಥವಾ ಆತನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವವರೆಗೆ ತನಿಖೆಗೆ ಸಹಕರಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.
ಸೂಳಿಭಾವಿಯಲ್ಲಿ ಆತನ ಹಾಗೂ ತಾಯಿಯ ಹೆಸರಲ್ಲಿರುವ ಜಮೀನು, ನಿವೇಶನವನ್ನು ಜಪ್ತಿ ಮಾಡಲು ಬ್ಯಾಂಕ್ ನಿರ್ಧರಿಸಿದೆ. ಹೀಗೆ ಮಾಡುವುದರಿಂದ ದುರುಪಯೋಗಪಡಿಸಿಕೊಂಡ ಹಣದ ಒಂದು ಭಾಗವಾದರೂ ಬರುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ.