alex Certify ಠೇವಣಿ ಹಿಂದಿರುಗಿಸದ ಅಂಗಡಿಯವನಿಗೆ ಬುದ್ದಿ ಕಲಿಸಲು ಮಹಿಳೆ ಮಾಡಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಠೇವಣಿ ಹಿಂದಿರುಗಿಸದ ಅಂಗಡಿಯವನಿಗೆ ಬುದ್ದಿ ಕಲಿಸಲು ಮಹಿಳೆ ಮಾಡಿದ್ದೇನು ಗೊತ್ತಾ…?

ಚೀನಾದ ಛೋಂಗ್‌ಕಿಂಗ್‌ನಲ್ಲಿ ಮಹಿಳೆಯೊಬ್ಬಳು ಬಟ್ಟೆ ಅಂಗಡಿ ಮಾಲೀಕನ ವಿರುದ್ಧ ತೋರಿಸಿದ ಸಿಟ್ಟು, ಎಲ್ಲರನ್ನು ದಂಗುಬಡಿಸಿದೆ. ವಿವಾಹಕ್ಕಾಗಿ ಸಿದ್ಧಪಡಿಸಲಾಗುವ “ಬ್ರೈಡ್ ಗೌನ್‌” ಡ್ರೆಸ್‌ಗಾಗಿ ಮಹಿಳೆಯೊಬ್ಬಳು ಅಂಗಡಿಯವನಿಗೆ ಮುಂಚಿತವಾಗಿ 91 ಸಾವಿರ ರೂ. ನೀಡಿದ್ದಳು. ‌

ಆದರೆ ಒಂದು ತಿಂಗಳ ಸಮಯ ಕಳೆದರೂ ಅಂಗಡಿಯವನು ಡ್ರೆಸ್‌ ಹೊಲಿದು ಕೊಡಲಿಲ್ಲ. ಬಳಿಕ ಭಾರಿ ಒತ್ತಡ ಹೇರಿದ ನಂತರ ಮಹಿಳೆಯ ಅಗತ್ಯಗಳನ್ನು ನಿರ್ಲಕ್ಷಿಸಿ, ಒಂದು ಡ್ರೆಸ್‌ ಅನ್ನು ತನ್ನ ಮನಬಂದಂತೆ ಹೊಲಿದು ಕೊಟ್ಟುಬಿಟ್ಟ.

ಇಷ್ಟೇ ಆಗಿದ್ದು, ಮಹಿಳೆಯು ಮನೆಯಲ್ಲಿ ಡ್ರೆಸ್‌ ತೊಟ್ಟು ನೋಡಿದಳು. ಬಹಳ ಬೇಸರವಾಗಿ, ಆಕ್ರೋಶದಿಂದ ಸೀದಾ ಅಂಗಡಿಗೆ ಬಂದಳು. ಅಲ್ಲಿದ್ದ ಕತ್ತರಿಯನ್ನು ತೆಗೆದುಕೊಂಡು ಅಂಗಡಿಯಲ್ಲಿ ಗ್ರಾಹಕರನ್ನು ಸೆಳೆಯಲೆಂದು ನೇತುಹಾಕಿದ್ದ ಬ್ರೈಡಲ್‌ ಗೌನ್‌ಗಳನ್ನು ಬರೋಬ್ಬರು 32 ತುಂಡುಗಳಾಗಿ ಕತ್ತರಿಸಿ ಹಾಕಿದಳು. ಅಂಗಡಿ ಮಾಲೀಕ ಸೇರಿದಂತೆ ಅಲ್ಲಿದ್ದ ಗ್ರಾಹಕರೆಲ್ಲರೂ ಕ್ಷಣಕಾಲ ದಂಗುಬಡಿದು ನಿಂತುಬಿಟ್ಟರು.

SHOCKING: ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಪೈಕಿ 21-30 ರ ವಯೋಮಾನದವರೇ ಅತಿ ಹೆಚ್ಚು

ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಈ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅಂಗಡಿಯವನ ವಿರುದ್ಧ ಇಷ್ಟೊಂದು ಸಿಟ್ಟನ್ನು ಮಹಿಳೆಯು ವ್ಯಕ್ತಪಡಿಸಲು ಮತ್ತೊಂದು ಕಾರಣವು ಕೂಡ ಇದೆ. ಆತ ನಿರ್ಲಕ್ಷ್ಯದಿಂದ ಹೊಲಿದಿದ್ದ ಗೌನ್‌ಗೆ ಬರೋಬ್ಬರಿ 10 ಲಕ್ಷ ರೂ. ಬಿಲ್‌ ಮಾಡಿದ್ದ. ಹಾಗಾಗಿ ಮಹಿಳೆಯು ಆಕ್ರೋಶಗೊಂಡಿದ್ದಾಳೆ ಎಂದು ಚೀನಾದ ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...