
ಕಠ್ಮಂಡು: “ಫ್ಯಾಟಿ ಗೋಸ್ ಟು ಆಫ್ರಿಕಾ” ಎಂಬ ಆನ್ಲೈನ್ ಫುಡ್ ಬ್ಲಾಗರ್ ನೇಪಾಳದಲ್ಲಿ ತನ್ನ ಲೈವ್ ಸ್ಟ್ರೀಮ್ನಲ್ಲಿಯೇ ಕೊಲ್ಲಲ್ಪಟ್ಟಿರುವ ಭಯಾನಕ ಘಟನೆ ನಡೆದಿದೆ.
ಕಠ್ಮಂಡುವಿನ ಬೀದಿಗಳಲ್ಲಿ ಪ್ರತಿಸ್ಪರ್ಧಿಗಳಿಂದ ಈ ಕೊಲೆ ನಡೆದಿದೆ ಎನ್ನಲಾಗಿದೆ. ಮಾರಣಾಂತಿಕ ದಾಳಿಯನ್ನು ಬ್ಲಾಗರ್ ಅವರ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.
29 ವರ್ಷದ ಬ್ಲಾಗರ್ ಅವರನ್ನು ಗ್ಯಾನ್ ಸೌಜಿಯೋಂಗ್ ಎಂದು ಗುರುತಿಸಲಾಗಿದೆ. ನೇಪಾಳದ ಇಂದ್ರ ಚೌಕ್ನ ಬೀದಿಗಳಲ್ಲಿ ತಮ್ಮ ಯೂಟ್ಯೂಬ್ಗೆ ಸಂಬಂಧಿಸಿದಂತೆ ನೇರ ಪ್ರಸಾರ ಮಾಡುತ್ತಿದ್ದರು. ಈ ಸಮಯದಲ್ಲಿ ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಾ ನಗುತ್ತಿದ್ದರು.
ಇದ್ದಕ್ಕಿದ್ದಂತೆಯೇ ಕಿರುಚಾಟ ಕೇಳಿಬಂದಿದೆ. ನಂತರ ನೋಡನೋಡುತ್ತಿದ್ದಂತೆಯೇ ಕೊಲೆಯಾಗಿದೆ. ಫುಡ್ ಬ್ಲಾಗ್ಗೆ ಸಂಬಂಧಿಸಿದಂತೆ ವಿಡಿಯೋ ಮಾಡುತ್ತಿದ್ದ ಕ್ಯಾಮೆರಾಮನ್ನ ಕ್ಯಾಮೆರಾದಲ್ಲಿ ಇವೆಲ್ಲಾ ಸೆರೆಯಾಗಿದೆ. ಫುಡ್ ಬ್ಲಾಗರ್ ಪ್ರತಿಸ್ಪರ್ಧಿಗಳು ಹೀಗೆ ಮಾಡಿದ್ದಾರೆ ಎನ್ನಲಾಗಿದೆ.