ಚೀನಾದಲ್ಲಿ ತಂದೆಯೊಬ್ಬ ತನ್ಮ ಮಗ ಗಣಿತ ಪರೀಕ್ಷೆಯಲ್ಲಿ 100ಕ್ಕೆ 6 ಅಂಕಗಳಿಸಿದ ನಂತರ ಕಣ್ಣೀರು ಹಾಕಿರುವ ವಿಡಿಯೋ ವೈರಲ್ ಆಗಿದೆ. ಇಡೀ ವರ್ಷ ತನ್ನ ಮಗನಿಗೆ ತಾನೇ ವೈಯಕ್ತಿಕವಾಗಿ ಬೋಧನೆ ಮಾಡಿದ್ದರಿಂದ ಈ ಅಂಕ ನೋಡಿ ತಂದೆಗೆ ಆಘಾತ ಉಂಟುಮಾಡಿತ್ತು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ತಂದೆ ಚೀನಾದ ಝೆಂಗ್ಝೌ ನಗರದ ಹೆನಾನ್ನವರಾಗಿದ್ದು, ಕಳೆದ ಒಂದು ವರ್ಷದಿಂದ ಪ್ರತಿದಿನ ತಮ್ಮ ಮಗುವಿಗೆ ಪಾಠ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಮಗ ಗಣಿತ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಬೇಕೆಂದು ಅವರೂ ಸಹ ತಡರಾತ್ರಿಯವರೆಗೆ ಎಚ್ಚರವಾಗಿರುತ್ತಿದ್ದರಂತೆ.
ಚೀನಾದ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ವೀಬೊದಲ್ಲಿ ಹಂಚಿಕೊಂಡ ನಂತರ ವೈರಲ್ ಆಗಿರುವ ವಿಡಿಯೊದಲ್ಲಿ ತಂದೆಯ ಪ್ರತಿಕ್ರಿಯೆಯನ್ನು ನೋಡಬಹುದಾಗಿದೆ. ಬೇಸರಗೊಂಡ ತಂದೆ ಕಣ್ಣೀರನ್ನು ತಡೆದುಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಆದರೆ ಸಾಧ್ಯವಾಗುವುದೇ ಇಲ್ಲ. ಕ್ಯಾಮರಾ ಎದುರಿಗೆ ಬಂದಾಗ ಕಣ್ಣೀರು ಒರೆಸಲು ಟವೆಲ್ ಬಳಸುತ್ತಾನೆ.
ಮಗ ಗಳಿಸಿದ ಅಂಕಗಳಿಂದ ನಿರಾಶೆಗೊಂಡ ತಂದೆ, “ಇನ್ನು ಮುಂದೆ ನನಗೆ ಹೆದರುವುದಿಲ್ಲ, ನನ್ನ ಪ್ರಯತ್ನಗಳು ವ್ಯರ್ಥವಾಗುತ್ತವೆ, ಅವನು ತಾನಾಗಿಯೇ ಹೋರಾಡಲಿ !’ ಎಂದು ಆತ ಹೇಳುವಾಗ ಈ ಕ್ಷಣವನ್ನು ಆತನ ಪತ್ನಿ ರೆಕಾರ್ಡ್ ಮಾಡಿದ್ದು, ಆಕೆ ನಗುವುದು ಸಹ ಕೇಳಿಸುತ್ತದೆ.
‘ಜತೆಗಿರುವನು ಚಂದಿರ’ ನಾಟಕ ಪ್ರದರ್ಶನಕ್ಕೆ RSS – ಬಜರಂಗ ದಳ ಕಾರ್ಯಕರ್ತರಿಂದ ಅಡ್ಡಿ
ಮಗ ಸ್ಕೋರ್ ಕಾರ್ಡ್ ತೋರಿಸಿದ ನಂತರ ತಂದೆಯ ಪ್ರಯತ್ನಗಳು ವ್ಯರ್ಥವಾಗಿದ್ದು ಸಾಬೀತಾಯಿತು. ಮಗ ಮೊದಲು ನೂರಕ್ಕೆ 40 ರಿಂದ 50 ರವರೆಗೆ ಉತ್ತಮ ಅಂಕಗಳನ್ನು ಪಡೆಯುತ್ತಿದ್ದನು ಎಂದು ತಿಳಿದುಬಂದಿದೆ. ಇದಲ್ಲದೆ, ಒಮ್ಮೆ 90 ಅಂಕ ಗಳಿಸಿದ್ದನು. ಆದರೆ, ತಂದೆಯಿಂದ ವೈಯಕ್ತಿಕವಾಗಿ ಹೇಳಿಸಿಕೊಂಡ ನಂತರ 10 ಅಂಕಗಳನ್ನೂ ಸಹ ಗಳಿಸಲು ಸಾಧ್ಯವಾಗಲಿಲ್ಲ ಎಂದು ಸ್ಥಳಿಯ ಮಾಧ್ಯಮ ವರದಿ ಮಾಡಿದೆ.
ಆ ವಿಡಿಯೊ ವೈಬೊದಲ್ಲಿ ಲಕ್ಷಾಂತರ ವೀಕ್ಷಣೆ ಗಳಿಸಿತು ಮತ್ತು ಬಳಕೆದಾರರಿಂದ ವಿಭಿನ್ನ ಪ್ರತಿಕ್ರಿಯೆ ಸಹ ಬಂದಿದೆ. ಕೆಲವರು ತಂದೆಯ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದರೆ, ತಂದೆಯಿಂದ ಟ್ಯೂಷನ್ ಬಯಸದ ಮಗನ ಪ್ರತಿಭಟನೆಯ ಸಂಕೇತವಾಗಿರಬಹುದು ಈ ಅಂಕ ಎಂದು ಕೆಲವರು ಶಂಕಿಸಿದ್ದಾರೆ.