ಚೀನಾದಲ್ಲಿ ಕೊರೊನಾ ಸೋಂಕಿನ ಸಂಖ್ಯೆಯಲ್ಲಿ ನಿರಂತರವಾಗಿ ಏರಿಕೆ ಕಂಡು ಬರುತ್ತಿದೆ. ಕಳೆದೊಂದು ವಾರದಲ್ಲಿ ಚೀನಾದ 11 ಕಡೆಗಳಲ್ಲಿ ನೂರಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ, ಇದು ಡ್ರ್ಯಾಗನ್ ರಾಷ್ಟ್ರದ ಆತಂಕಕ್ಕೆ ಕಾರಣವಾಗಿದೆ.
ಅಕ್ಟೋಬರ್ 17ರಿಂದ ದೇಶದ ಅನೇಕ ಕಡೆಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ತಿದೆ ಹಾಗೂ ಇದು ವೇಗವಾಗಿ ವಿಸ್ತರಿಸುತ್ತಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ ವಕ್ತಾರ ಮಿ.ಫೆಂಗ್ ಹೇಳಿದ್ದಾರೆ. ಬಿಲಿಯನ್ಗಟ್ಟಲೇ ಜನರು ಇರುವ ಚೀನಾದಲ್ಲಿ 75 ಪ್ರತಿಶತಕ್ಕೂ ಅಧಿಕ ಮಂದಿ ಸಂಪೂರ್ಣ ಲಸಿಕೆ ಪಡೆದಿದ್ದರೂ ಸಹ ಸೋಂಕು ಹರಡುತ್ತಿರೋದು ಆತಂಕಕ್ಕೆ ಕಾರಣವಾಗಿದೆ.
BIG NEWS: ಧಮ್ ಇದ್ರೆ ಒಂದೇ ವೇದಿಕೆ ಮೇಲೆ ಚರ್ಚೆಗೆ ಬನ್ನಿ; ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಬಹಿರಂಗ ಸವಾಲು
ಕೊರೊನಾ ವೈರಸ್ ಹರಡುವಿಕೆಯು ಚೀನಾ ದೇಶವನ್ನು ಚಿಂತೆಗೀಡು ಮಾಡಿದೆ. ಹೀಗಾಗಿ ಶೂನ್ಯ ಕೋವಿಡ್ ನೀತಿಯನ್ನು ಜಾರಿಗೆ ತರಲು ಇದು ಪ್ರೇರೇಪಿಸುತ್ತಿದೆ. ಉತ್ತರ ಭಾಗದ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡ ಹಿರಿಯ ನಾಗರಿಕರ ಗುಂಪಿನಲ್ಲಿ ಅಕ್ಟೋಬರ್ 16ರಂದು ಮೊದಲ ಸೋಂಕು ಪತ್ತೆಯಾಗಿದೆ. ಇವರೆಲ್ಲರೂ ಕೊರೊನಾ ಲಸಿಕೆ ಪಡೆದಿದ್ದರೂ ಸಹ ಸೋಂಕಿಗೆ ಒಳಗಾಗಿದ್ದಾರೆ.