alex Certify ವಿದ್ಯಾರ್ಥಿಗಳ ಮೇಲೆ ‘ಹೋಂ ವರ್ಕ್‌ʼ ಒತ್ತಡ ತಗ್ಗಿಸಲು ಮುಂದಾದ ಚೀನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿಗಳ ಮೇಲೆ ‘ಹೋಂ ವರ್ಕ್‌ʼ ಒತ್ತಡ ತಗ್ಗಿಸಲು ಮುಂದಾದ ಚೀನಾ

China passes new law to reduce homework pressure on students | World News - Hindustan Times

ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷ ಣ ಹೊರತಾಗಿ ಸಾಮಾಜಿಕ, ಖಾಸಗಿ ಬದುಕು ಕೂಡ ಬಹಳ ಮುಖ್ಯವಾಗಿದೆ. ಸ್ಪರ್ಧಾತ್ಮಕ ಜಗತ್ತಿನ ಹೆಸರಿನಲ್ಲಿ ಅವರ ಬಾಲ್ಯ, ಖಾಸಗಿ ವಿಚಾರಗಳನ್ನು ಶಾಲೆಯ ಓದು ನುಂಗಿ ಹಾಕಬಾರದು ಎಂದು ಚೀನಾ ಸರ್ಕಾರವು ಸ್ಪಷ್ಟ ನಿಲುವು ತಾಳಿದೆ.

ಶಾಲೆಯ ಅವಧಿಯೇತರ (ಆಫ್‌ -ಸ್ಕೂಲಿಂಗ್‌) ಮತ್ತು ಹೋಮ್‌ ವರ್ಕ್‌ಗಳ ಒತ್ತಡ ಕಡಿತಗೊಳಿಸಿ, ಸೂಕ್ತ ಮಿತಿಯನ್ನು ಹೇರುವ ಹೊಸ ಕಾನೂನು ಜಾರಿಗೆ ತರಲಾಗಿದೆ. ದೈಹಿಕ ಶಿಕ್ಷಣ, ಮನೆಯಲ್ಲಿ ಕುಟುಂಬಸ್ಥರ ಜತೆಗೆ ಕಾಲಕಳೆಯುವಿಕೆ, ಸಾಕಷ್ಟು ನಿದ್ರೆಗಳಿಗೂ ಸಮಯ ಸಿಗುವಂತೆ ಸರ್ಕಾರ ಕಾಳಜಿ ವಹಿಸಿದೆ.

ಬೆಂಕಿಪೊಟ್ಟಣ ದರವೂ ಹೆಚ್ಚಳ: 14 ವರ್ಷದ ನಂತ್ರ ಬೆಂಕಿಪೊಟ್ಟಣ ದರ 2 ರೂ.ಗೆ ಏರಿಕೆ

ಚೀನಾದ ಸಂಸತ್‌ ’’ರಾಷ್ಟ್ರೀಯ ಪೀಪಲ್ಸ್‌ ಕಾಂಗ್ರೆಸ್‌ ’’ನಲ್ಲಿ ಅನುಮೋದನೆ ಪಡೆದಿರುವ ಹೊಸ ಕಾಯಿದೆ ಅನ್ವಯ, ಕೌಟುಂಬಿಕ ಶಿಕ್ಷಣದ ಜವಾಬ್ದಾರಿಯು ಶಾಲೆಗಳಿಗೆ ಇರುವುದಿಲ್ಲ. ಅದು ಕೇವಲ ಪೋಷಕರು ಅಥವಾ ಪಾಲಕರ ಹಕ್ಕು. ಮನೆಯಲ್ಲಿ ಮಕ್ಕಳ ಶಿಕ್ಷಣದ ಕುರಿತು ಶಾಲೆ ಮತ್ತು ಸಮಾಜ ಇತಿಮಿತಿಯಲ್ಲಿ ಸಲಹೆ ಮಾತ್ರ ಕೊಡಬಹುದು. ಆದರೆ ವಿದ್ಯಾರ್ಥಿಗಳ ಮೇಲೆ ಮನೆಯಲ್ಲಿನ ಕಲಿಕೆ ವಿಚಾರದಲ್ಲಿ ಕಡ್ಡಾಯ ಹೆಸರಿನಲ್ಲಿ ಒತ್ತಡ ಹೇರುವಂತಿಲ್ಲ ಎಂದು ಘೋಷಿಸಲಾಗಿದೆ.

1 ರಿಂದ 5ನೇ ತರಗತಿ ಮಕ್ಕಳ ಪೋಷಕರಿಗೆ ಮುಖ್ಯ ಮಾಹಿತಿ: ನಾಳೆಯಿಂದ ಶಾಲೆ ಆರಂಭ

ಪೋಷಕರು ಅಥವಾ ಪಾಲಕರು ಮಕ್ಕಳ ಮೇಲೆ ಮನೆಯಲ್ಲಿ ಓದುವ ಬಗ್ಗೆಯೇ ಸದಾಕಾಲ ಒತ್ತಡ ಹೇರುವಂತಿಲ್ಲ. ಅವರ ಆಟ-ಪಾಠ, ವಿಶ್ರಾಂತಿಗೂ ಹೆಚ್ಚು ಒತ್ತು ನೀಡಬೇಕು. ಇಂಟರ್‌ನೆಟ್‌ಗೆ, ಆನ್‌ಲೈನ್‌ ಗೇಮ್ಸ್‌ಗಳಿಗೆ ಮಕ್ಕಳು ದಾಸರಾಗದಂತೆ ಎಚ್ಚರಿಕೆ ವಹಿಸುವುದು ಪೋಷಕರ ಕರ್ತವ್ಯವಾಗಿದೆ. ಮಕ್ಕಳ ಮನಸ್ಥಿತಿಯನ್ನು ಪೋಷಕರು ಬಹಳ ಹತ್ತಿರದಿಂದ ಗಮನಿಸಿ, ಮಾರ್ಗದರ್ಶನ ನೀಡುತ್ತಿರಬೇಕು ಎಂದು ಸರ್ಕಾರವು ಕಿವಿಮಾತು ಹೇಳಿದೆ.

ಈಗಾಗಲೇ ವಿಡಿಯೊ ಗೇಮ್ಸ್‌ಗಳನ್ನು ಅಪ್ರಾಪ್ತ ವಯಸ್ಸಿನ ಮಕ್ಕಳು ಇಂತಿಷ್ಟೇ ಸಮಯ ಮಾತ್ರ ಆಡಬೇಕು ಎಂಬ ಕಠಿಣ ಕಾನೂನನ್ನು ಚೀನಾದಲ್ಲಿ ಸರ್ಕಾರವೇ ಜಾರಿಗೆ ತಂದಿದೆ. ಅದರಂತೆ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಚಿಣ್ಣರು ಕೇವಲ ಒಂದು ಗಂಟೆ ಮಾತ್ರವೇ ಆನ್‌ಲೈನ್‌ ಗೇಮ್‌ ಆಡಬಹುದು. ಅದು ಕೂಡ ರಾತ್ರಿ 8-9 ಗಂಟೆಗೆ ಮಾತ್ರವೇ ಎಂದು ಸರ್ಕಾರ ನೋಟಿಸ್‌ ಹೊರಡಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...