alex Certify ವನ್ಯಜೀವಿಗಳನ್ನು ವೀಕ್ಷಿಸಲೆಂದೇ ಆರಂಭವಾಗಿದ್ದ ಹೋಟೆಲ್ ಬಂದ್ ಮಾಡಲು ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವನ್ಯಜೀವಿಗಳನ್ನು ವೀಕ್ಷಿಸಲೆಂದೇ ಆರಂಭವಾಗಿದ್ದ ಹೋಟೆಲ್ ಬಂದ್ ಮಾಡಲು ಆದೇಶ

ಪೂರ್ವ ಚೀನಾದ ಹೋಟೆಲ್ ಕೋಣೆಯೊಂದನ್ನು ಸುತ್ತುವರಿದಂತೆ ಇರುವ ಜಾಗದಲ್ಲಿ ಬಂಧಿಯಾಗಿರುವ ಹುಲಿಯನ್ನು ತೋರುತ್ತಿರುವ ಚಿತ್ರವು ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.

ಈ ಹೋಟೆಲ್ 20,000ಕ್ಕೂ ಹೆಚ್ಚಿನ ವನ್ಯಪ್ರಾಣಿಗಳಿರುವ ನಾಂಟಾಂಗ್ ಅರಣ್ಯ ಸಫಾರಿ ಪಾರ್ಕ್‌ಗೆ ಹೊಂದಿಕೊಂಡಂತಿದೆ. ಡೈಲಿ ಮೇಲ್ ಪ್ರಕಾರ, ಪ್ರಾಣಿಗಳ ಯೋಗಕ್ಷೇಮದ ಕಳಕಳಿಯಿಂದಾಗಿ ಈ ಹುಲಿ ವೀಕ್ಷಣೆಗೆ ತೆರೆ ಎಳೆಯಲು ಸರ್ಕಾರಿ ಅಧಿಕಾರಿಗಳು ಆದೇಶಿಸಿದ್ದಾರೆ.

ಏಕಕಾಲದಲ್ಲಿ 6 ಹುಲಿಗಳನ್ನು ರೋಮಾಂಚನಗೊಂಡ ಪ್ರವಾಸಿಗರು

ಸ್ಫೋಟ ತಾಳಿಕೊಳ್ಳಬಲ್ಲ ಗಾಜಿನಿಂದ ಬೇರ್ಪಡಿಸಲಾದ ಹೋಟೆಲ್ ಕೊಠಡಿಯೊಳಗಿಂದ ಬಿಳಿ ಹುಲಿಯನ್ನು ಕಾಣಬಹುದು. ನಾಂಟಾಂಗ್‌ನಲ್ಲಿರುವ ಸೆಂಡಿ ಟ್ರೈಬ್ ಟ್ರೀಹೌಸ್ ಹೋಟೆಲ್‌ನಲ್ಲಿ ಈ ಕೊಠಡಿ ಇದೆ.

ಅತಿಥಿಗಳು ಗಾಜಿನಿಂದಾಗಿ ಕಾಡು ಪ್ರಾಣಿಗಳಿಂದ ರಕ್ಷಿಸಲ್ಪಟ್ಟಿದ್ದರೂ, ವಿನ್ಯಾಸವು ಹುಲಿಯ ಹಿತಾಸಕ್ತಿಯನ್ನು ಪರಿಗಣಿಸಿಲ್ಲ ಎಂದು ಬೀಜಿಂಗ್ ನ್ಯೂಸ್ ತಿಳಿಸಿರುವುದಾಗಿ ಡೈಲಿ ಮೇಲ್‌ ವರದಿ ಮಾಡಿದೆ.

ಈ ಗಾಜಿನ ಕೋಣೆಯ ವಿನ್ಯಾಸವು ಧ್ವನಿ ನಿರೋಧಕವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಮತ್ತಷ್ಟು ಮೌಲ್ಯಮಾಪನ ಮಾಡಬೇಕಿದ್ದು, ಶಬ್ದದಿಂದ ಹುಲಿಯು ಗಾಬರಿಯಾಗುವುದಿಲ್ಲ ಎಂದು ಖಚಿತವಾಗಿಲ್ಲ. ಒಂದು ದಿಕ್ಕಿನ ಗಾಜಿನಿಂದ ಪ್ರಾಣಿಗಳಿಗೆ ಅನಾನುಕೂಲತೆಗಳನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ.

ಹೋಟೆಲ್‌ನಲ್ಲಿ ಜಿರಾಫೆಗಳು, ಸಿಂಹಗಳು ಮತ್ತು ಜೀಬ್ರಾಗಳಂತಹ ಇತರ ಪ್ರಾಣಿಗಳ ವೀಕ್ಷಣೆಗಳೊಂದಿಗೆ ಕೊಠಡಿಗಳನ್ನು ಸಹ ನೀಡಲಾಗಿದೆ.

ಮುಂಬರುವ ಚೀನೀ ಹೊಸ ವರ್ಷವನ್ನು ಪ್ರಚಾರದ ಸಾಧನವಾಗಿ ಹೋಟೆಲ್ ಬಳಸುತ್ತಿದೆ ಎಂದು ಚೀನಾ ನ್ಯಾಷನಲ್ ರೇಡಿಯೋ ಸೂಚಿಸುತ್ತದೆ. ಚೀನಾದ ನಿವಾಸಿಗಳು ಫೆಬ್ರವರಿ 1 ರಂದು ಚೀನೀ ಹೊಸ ವರ್ಷವನ್ನು ಹುಲಿಯ ವರ್ಷವಾಗಿ ಆಚರಿಸಲು ಸಿದ್ಧರಾಗಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...