alex Certify ಶಾಲಾ ಮಕ್ಕಳ ಜೊತೆ ಕುಟುಂಬಸ್ಥರಿಗೂ ಲಸಿಕೆ ಕಡ್ಡಾಯಗೊಳಿಸಿದೆ ಈ ರಾಷ್ಟ್ರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲಾ ಮಕ್ಕಳ ಜೊತೆ ಕುಟುಂಬಸ್ಥರಿಗೂ ಲಸಿಕೆ ಕಡ್ಡಾಯಗೊಳಿಸಿದೆ ಈ ರಾಷ್ಟ್ರ….!

ಸೀಮಿತ ಕ್ಷೇತ್ರಗಳಲ್ಲಿ ಕೊರೊನಾ ಲಸಿಕೆಯನ್ನ ಕಡ್ಡಾಯ ಮಾಡಿರುವ ಫ್ರಾನ್ಸ್​ ಹಾಗೂ ಗ್ರೀಸ್​ನಂತೆಯೇ ಚೀನಾ ಕೂಡ ಶಾಲಾ ಮಕ್ಕಳಿಗೆ ಕೊರೊನಾ ಲಸಿಕೆಯನ್ನ ಕಡ್ಡಾಯಗೊಳಿಸಿದೆ.

ವಿದ್ಯಾರ್ಥಿಗಳು ಹಾಗೂ ಅವರ ಸಂಪೂರ್ಣ ಕುಟುಂಬ ಕೊರೊನಾ ಲಸಿಕೆಯನ್ನ ಪಡೆಯದ ಹೊರತು ಮಕ್ಕಳು ಸೆಪ್ಟೆಂಬರ್​ ತಿಂಗಳಲ್ಲಿ ಶಾಲೆಗೆ ಪ್ರವೇಶ ಮಾಡುವಂತಿಲ್ಲ ಎಂದು ಚೀನಾದ ಕೆಲ ಸ್ಥಳೀಯ ಸರ್ಕಾರಗಳು ಆದೇಶ ಹೊರಡಿಸಿವೆ.

ಅನೇಕ ನಗರಗಳಲ್ಲಿ ಆಸ್ಪತ್ರೆ ಹಾಗೂ ಸೂಪರ್​ ಮಾರ್ಕೆಟ್​ಗಳಂತಹ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಲು ಕೊರೊನಾ ಲಸಿಕೆ ಸ್ವೀಕರಿಸಿರೋದು ಕಡ್ಡಾಯವೆಂದು ಆದೇಶ ಹೊರಡಿಸಲಾಗಿದೆ.

ಈ ವಾರದ ಆರಂಭದಲ್ಲಿ ಗುವಾಂಗ್ಕ್ಸಿಪ್ರಾಂತ್ಯದಲ್ಲಿ ಪ್ರತಿಯೊಬ್ಬರೂ ಕೊರೊನಾ ಲಸಿಕೆಯನ್ನ ಕಡ್ಡಾಯವಾಗಿ ಪಡೆಯಬೇಕು. ಹೀಗೆ ಮಾಡಿದರೆ ಮಾತ್ರ ಶಾಲೆಗೆ ಮರಳುವ ಮಕ್ಕಳು ಸೋಂಕನ್ನ ತರಲು ಸಾಧ್ಯವಿಲ್ಲ ಎಂದು ಹೇಳಿತ್ತು. ಇದೀಗ ಚೀನಾದ ಅನೇಕ ಪ್ರಾಂತ್ಯಗಳಿಗೆ ಇದೇ ಮಾದರಿಯ ಆದೇಶವನ್ನ ಹೊರಡಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...