ಸೀಮಿತ ಕ್ಷೇತ್ರಗಳಲ್ಲಿ ಕೊರೊನಾ ಲಸಿಕೆಯನ್ನ ಕಡ್ಡಾಯ ಮಾಡಿರುವ ಫ್ರಾನ್ಸ್ ಹಾಗೂ ಗ್ರೀಸ್ನಂತೆಯೇ ಚೀನಾ ಕೂಡ ಶಾಲಾ ಮಕ್ಕಳಿಗೆ ಕೊರೊನಾ ಲಸಿಕೆಯನ್ನ ಕಡ್ಡಾಯಗೊಳಿಸಿದೆ.
ವಿದ್ಯಾರ್ಥಿಗಳು ಹಾಗೂ ಅವರ ಸಂಪೂರ್ಣ ಕುಟುಂಬ ಕೊರೊನಾ ಲಸಿಕೆಯನ್ನ ಪಡೆಯದ ಹೊರತು ಮಕ್ಕಳು ಸೆಪ್ಟೆಂಬರ್ ತಿಂಗಳಲ್ಲಿ ಶಾಲೆಗೆ ಪ್ರವೇಶ ಮಾಡುವಂತಿಲ್ಲ ಎಂದು ಚೀನಾದ ಕೆಲ ಸ್ಥಳೀಯ ಸರ್ಕಾರಗಳು ಆದೇಶ ಹೊರಡಿಸಿವೆ.
ಅನೇಕ ನಗರಗಳಲ್ಲಿ ಆಸ್ಪತ್ರೆ ಹಾಗೂ ಸೂಪರ್ ಮಾರ್ಕೆಟ್ಗಳಂತಹ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಲು ಕೊರೊನಾ ಲಸಿಕೆ ಸ್ವೀಕರಿಸಿರೋದು ಕಡ್ಡಾಯವೆಂದು ಆದೇಶ ಹೊರಡಿಸಲಾಗಿದೆ.
ಈ ವಾರದ ಆರಂಭದಲ್ಲಿ ಗುವಾಂಗ್ಕ್ಸಿಪ್ರಾಂತ್ಯದಲ್ಲಿ ಪ್ರತಿಯೊಬ್ಬರೂ ಕೊರೊನಾ ಲಸಿಕೆಯನ್ನ ಕಡ್ಡಾಯವಾಗಿ ಪಡೆಯಬೇಕು. ಹೀಗೆ ಮಾಡಿದರೆ ಮಾತ್ರ ಶಾಲೆಗೆ ಮರಳುವ ಮಕ್ಕಳು ಸೋಂಕನ್ನ ತರಲು ಸಾಧ್ಯವಿಲ್ಲ ಎಂದು ಹೇಳಿತ್ತು. ಇದೀಗ ಚೀನಾದ ಅನೇಕ ಪ್ರಾಂತ್ಯಗಳಿಗೆ ಇದೇ ಮಾದರಿಯ ಆದೇಶವನ್ನ ಹೊರಡಿಸಲಾಗಿದೆ.