
ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ (ಐಎಫ್‌ಎಸ್) ಅಧಿಕಾರಿ ರಮೇಶ್ ಪಾಂಡೆ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
“ಚಿರತೆಗಳು ಬುದ್ಧಿವಂತ ಮತ್ತು ಕಳ್ಳತನ…!” ಎಂಬ ಶೀರ್ಷಿಕೆಯನ್ನು ಇದಕ್ಕೆ ನೀಡಲಾಗಿದೆ. ಹುಲ್ಲನ್ನು ಮೆಲ್ಲುತ್ತಾ ಜಿಂಕೆ ಅಡ್ಡಾಡುತ್ತಿದ್ದ ಸಂದರ್ಭದಲ್ಲಿ ಅದು ಎಲ್ಲಿ ಓಡಿಹೋಗಿಬಿಟ್ಟೀತು ಎಂದು ಚಿರತೆ ಕಾದು ಕುಳಿತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಜಿಂಕೆಯನ್ನು ಬೇಟೆಯಾಡಲು ಚಿರತೆ ತಾಳ್ಮೆಯಿಂದ ಕಾಯುವುದನ್ನು ಇದು ತೋರಿಸುತ್ತದೆ.
ನಿಧಾನಕ್ಕೆ ಮುಂದೆ ಮುಂದೆ ಚಲಿಸುತ್ತಾ ಚಂಗನೆ ಜಿಗಿದು ಜಿಂಕೆಯ ಮೇಲೆ ಬೀಳುತ್ತದೆ. ಜಿಂಕೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಅದು ಸಾಧ್ಯವಾಗುವುದಿಲ್ಲ. ಕಾಡುಪ್ರಾಣಿಗಳ ಈ ಬೇಟೆಯ ಕುತೂಹಲದ ಕ್ರಮಕ್ಕೆ ನೆಟ್ಟಿಗರು ಥಹರೇವಾರಿ ಕಮೆಂಟ್ ನೀಡುತ್ತಿದ್ದಾರೆ.