ವ್ಯವಸ್ಥೆಯ ದೋಷ, ಸ್ಥಳೀಯರ ನಿರ್ಲಕ್ಷ್ಯ ದಿಂದ ಕಸದ ತೊಟ್ಟಿಯಂತಿದ್ದ ಪ್ರದೇಶವನ್ನು ಮಕ್ಕಳು ಸೇರಿ ಗ್ರೀನ್ ಪಾರ್ಕ್ ಮಾಡಿ ಗಮನ ಸೆಳೆದಿದ್ದಾರೆ.
ಇದು ನಡೆದಿರುವುದು ಕೊಲ್ಕೊತ್ತಾದಲ್ಲಿ. ಸಬುಜ್ ದ್ವೀಪ್ ವಾರ್ಡ್ 65 ಕೋಲ್ಕತ್ತಾ ನಗರದ ಹೃದಯಭಾಗದಲ್ಲಿರುವ ದಟ್ಟವಾದ ಜನನಿಬಿಡ ಕೊಳೆಗೇರಿಯಾಗಿದೆ.
ಈ ಜಾಗವು ಮೊದಲು ಕೊಳವಾಗಿತ್ತು, ಅದರಲ್ಲಿ ಕಟ್ಟಡದ ಕಸ ಮತ್ತು ಮನೆಯ ತ್ಯಾಜ್ಯದಂತಹ ಅವಶೇಷಗಳನ್ನು ಸುರಿಯಲಾಗುತ್ತಿತ್ತು, ಇದರಿಂದಾಗಿ ಅದನ್ನು ತೆರೆದ ಘನತ್ಯಾಜ್ಯ ವಿಲೇವಾರಿ ಮೈದಾನವಾಗಿ ಪರಿವರ್ತಿಸಲಾಯಿತು.
ಆದರೆ ಅಲ್ಲೇ ಅರ್ಬನ್ ಪ್ರೈಮರಿ ಹೆಲ್ತ್ ಸೆಂಟರ್ ಇದ್ದು, ಮಕ್ಕಳು, ಹಿರಿಯ ನಾಗರಿಕರು, ಈ ಕೇಂದ್ರಕ್ಕೆ ಭೇಟಿ ನೀಡುವ ರೋಗಿಗಳು, ಆರೋಗ್ಯ ಸಿಬ್ಬಂದಿಗೆ ಇದು ಅನೆೈರ್ಮಲ್ಯ ಸ್ಥಳವಾಗಿ ಮಾರ್ಪಟ್ಟಿತು. ಕತ್ತಲಾದ ನಂತರ ಮಾದಕ ವಸ್ತುಗಳ ಸೇವನೆ ಮತ್ತು ಜೂಜಾಟದಲ್ಲಿ ತೊಡಗಿರುವವರ ತಾಣವಾಯಿತು.
ಇದನ್ನು ಗಮನಿಸಿದ ಸಮುದಾಯದ ಕೆಲವು ಗುಂಪುಗಳು ಈ ಪ್ರದೇಶದ ಪರಿವರ್ತನೆಗೆ ಮುಂದಾಯಿತು. ಮಕ್ಕಳು, ಯುವಕರ ಗುಂಪುಗಳಿಗೆ ತಾಯಂದಿರ ಗುಂಪುಗಳ ಸಮುದಾಯ ಗುಂಪು, ಸುತ್ತಮುತ್ತಲಿನ ಮನೆಗಳ ನಿವಾಸಿಗಳು, ವಾರ್ಡ್ ಸಿಬ್ಬಂದಿ ಬೆಂಬಲವಾಗಿ ನಿಂತರು.
ಈ ಜಾಗದಲ್ಲಿ ಕಸ ಎಸೆಯುವುದನ್ನು ನಿಲ್ಲಿಸಲು ಸಮುದಾಯವನ್ನು ಪ್ರೇರೇಪಿಸುವ ಕೆಲಸ ನಡೆಯಿತು. ಬಳಿಕ ಆ ಪ್ರದೇಶವನ್ನು ಹಸಿರಿನ ಓಯಸಿಸ್ ಆಗಿ ಪರಿವರ್ತಿಸುವ ಆಲೋಚನೆ ಹೊರಹೊಮ್ಮಿತು.
ಈ ಪ್ರಯಾಣವು ಹಲವಾರು ತಿರುವುಗಳು ಮತ್ತು ಮೈಲುಗಲ್ಲುಗಳಿಗೆ ಸಾಕ್ಷಿಯಾಯಿತು. ಗ್ರೀನ್ ವುಡ್ ಎಂಬ ಸಂಸ್ಥೆ ಕೈ ಜೋಡಿಸಿತು.
ಆ ಪ್ರದೇಶ ಸ್ವಚ್ಛಗೊಳಿಸಿ ಅಂತಿಮವಾಗಿ ಸಂಪೂರ್ಣ ಜಾಗವನ್ನು ನವೀನ ವಿನ್ಯಾಸಗೊಂಡಿದೆ. ಇದೀಗ ಆ ಪ್ರದೇಶ ಡಂಪ್ ಯಾರ್ಡ್ ಆಗಿತ್ತೇ ಎನ್ನುವಷ್ಟು ಬದಲಾವಣೆ ಕಾಣಿಸಿದೆ. ಜನರ ಅಚ್ಚುಮೆಚ್ಚಿನ ಪ್ರದೇಶ ಕೂಡ ಆಗಿದೆ.