ಹಬ್ಬದ ದಿನಗಳಲ್ಲಿ ಅಥವಾ ಏನಾದರೂ ಸಿಹಿ ತಿನ್ನಬೇಕು ಅನಿಸಿದಾಗ ಒಮ್ಮೆ ಬಾದಾಮ್ ಹಲ್ವಾ ಮನೆಯಲ್ಲಿ ಟ್ರೈ ಮಾಡಿ ನೋಡಿ. ಬಾದಾಮಿ ದುಬಾರಿ ಅನಿಸಿದರೂ ಇದರ ಹಲ್ವಾ ಮಾತ್ರ ಸಖತ್ ಆಗಿರುತ್ತದೆ. ಮಾಡುವುದಕ್ಕೂ ಸುಲಭವಿದೆ. ಮಕ್ಕಳು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ.
ಬೇಕಾಗುವ ಸಾಮಾಗ್ರಿಗಳು:ಬಾದಾಮಿ-1 ಕಪ್, ಹಾಲು ಎರಡು ಕಪ್, ತುಪ್ಪ-1-ಕಪ್, ಸಕ್ಕರೆ -1 ಕಪ್, ಏಲಕ್ಕಿ ಪುಡಿ, ಚಿಟಿಕೆ, ಪಿಸ್ತಾ-ಚಿಕ್ಕದ್ದಾಗಿ ಕತ್ತರಿಸಿದ್ದು, ಬಿಸಿ ನೀರು 2 ಕಪ್.
ಮಾಡುವ ವಿಧಾನ: ಮೊದಲಿಗೆ ಬಾದಾಮಿಯನ್ನು ಅರ್ಧ ಗಂಟೆ ಬಿಸಿ ನೀರಲ್ಲಿ ನೆನೆಸಿಡಿ. ನಂತರ ಇದರ ಸಿಪ್ಪೆ ಸುಲಿದು ಇದನ್ನು ಮಿಕ್ಸಿ ಜಾರಿಗೆ ಹಾಕಿ. ಅದಕ್ಕೆ 1 ಕಪ್ ಹಾಲು ಹಾಕಿ ನಯವಾಗಿ. ರುಬ್ಬಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ 1 ಕಪ್ ತುಪ್ಪ ಹಾಕಿ ಆಮೇಲೆ ರುಬ್ಬಿಟ್ಟುಕೊಂಡ ಬಾದಾಮಿ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ಆಮೇಲೆ ಅದಕ್ಕೆ 1 ಕಪ್ ಹಾಲು ಹಾಕಿ ಕೈಯಾಡಿಸಿ. ಈ ಮಿಶ್ರಣ ತುಸು ದಪ್ಪಗಾಗುತ್ತಿದ್ದಂತೆ 1 ಕಪ್ ಸಕ್ಕರೆ ಹಾಕಿ ಚೆನ್ನಾಗಿ ತಿರುಗಿಸಿ. ತಳಹತ್ತದಂತೆ ನೋಡಿಕೊಳ್ಳಿ. ತುಪ್ಪ ತಳ ಬಿಡುತ್ತಿದ್ದಂತೆ ಅದಕ್ಕೆ ಏಲಕ್ಕಿ ಪುಡಿ, ಕತ್ತರಿಸಿಟ್ಟುಕೊಂಡ ಪಿಸ್ತಾ ಚೂರುಗಳನ್ನು ಹಾಕಿ ಮಿಶ್ರಣ ಮಾಡಿದರೆ ರುಚಿಕರವಾದ ಬಾದಾಮ್ ಹಲ್ವಾ ಸವಿಯಲು ಸಿದ್ಧ.