alex Certify BIG NEWS: ಮೂರನೇ ಅಲೆಗೆ ಮುನ್ನವೇ ಮಕ್ಕಳಿಗೆ ಕೊರೋನಾ ಶಾಕ್, ಸೋಂಕು ಶೀಘ್ರದಲ್ಲೇ ಮೂರು ಪಟ್ಟು ಏರಿಕೆ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮೂರನೇ ಅಲೆಗೆ ಮುನ್ನವೇ ಮಕ್ಕಳಿಗೆ ಕೊರೋನಾ ಶಾಕ್, ಸೋಂಕು ಶೀಘ್ರದಲ್ಲೇ ಮೂರು ಪಟ್ಟು ಏರಿಕೆ ಸಾಧ್ಯತೆ

ಬೆಂಗಳೂರು: ಮೂರನೇ ಅಲೆಗೆ ಮುನ್ನವೇ ಆತಂಕಕಾರಿ ಬೆಳವಣಿಗೆ ಕಂಡುಬಂದಿದೆ. 10 ದಿನದ ಅವಧಿಯಲ್ಲಿ ಬೆಂಗಳೂರಿನ 500 ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಸೋಂಕು ಶೀಘ್ರದಲ್ಲೇ ಮೂರು ಪಟ್ಟು ಏರಿಕೆಯಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬಿಬಿಎಂಪಿ ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ, 10 ದಿನದ ಅವಧಿಯಲ್ಲಿ 499 ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ. 0 – 9 ವರ್ಷದ 194 ಹಾಗೂ 10 – 19 ವರ್ಷದ 355 ಮಕ್ಕಳಿಗೆ ಸೋಂಕು ತಗಲಿದೆ. ಮಕ್ಕಳು ಅನವಶ್ಯಕವಾಗಿ ಹೊರಗೆ ಬರಬಾರದು. ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿ, ನಿಯಮ ಪಾಲಿಸಬೇಕು. ಮನೆಯಲ್ಲಿಯೇ ಮಕ್ಕಳನ್ನು ಉಳಿಸಿಕೊಳ್ಳಬೇಕೆಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...