alex Certify 5 ವರ್ಷದೊಳಗಿನ ಮಕ್ಕಳ ಪೋಷಕರಿಗೆ ಮುಖ್ಯ ಮಾಹಿತಿ: ಆಧಾರ್ ನೋಂದಣಿ ಅಭಿಯಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

5 ವರ್ಷದೊಳಗಿನ ಮಕ್ಕಳ ಪೋಷಕರಿಗೆ ಮುಖ್ಯ ಮಾಹಿತಿ: ಆಧಾರ್ ನೋಂದಣಿ ಅಭಿಯಾನ

ಮಡಿಕೇರಿ: 0-5 ವರ್ಷದ ಮಕ್ಕಳ ಬಿ.ಆರ್.ಎನ್.(ಬರ್ತ್ ರಿಜಿಸ್ಟ್ರೇಷನ್ ನಂಬರ್) ನ್ನು ಉಪಯೋಗಿ ಸಿ.ಇ.ಎಲ್.ಸಿ.(ಚೈಲ್ಡ್ ಎನ್‍ರೋಲ್‍ಮೆಂಟ್ ಕ್ಲೈಂಟ್) ತಂತ್ರಾಂಶದಲ್ಲಿ ಆಧಾರ್ ನೋಂದಣಿ ಮಾಡುವ ಅಭಿಯಾನವನ್ನು ಜಿಲ್ಲಾಡಳಿತ ಹಮ್ಮಿಕೊಂಡಿದೆ.

ಈ ಸಂಬಂಧ ಪ್ರತಿ ತಾಲ್ಲೂಕಿಗೆ ತಲಾ ಒಂದರಂತೆ ಒಟ್ಟು 5 ಆಧಾರ್ ಮೊಬೈಲ್ ಆಪರೇಟರ್ ಗಳಿಗೆ ಬುಧವಾರ  ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಟ್ಯಾಬ್‍ ಒದಗಿಸಿದರು.

ಆಧಾರ್ ನೋಂದಣಿ ಮಾಡುವ ದಿನಾಂಕವನ್ನು ಗ್ರಾಮ ಪಂಚಾಯಿತಿ ಮತ್ತು ಅಂಗನವಾಡಿಗಳ ಮೂಲಕ ತಿಳಿಸಲಾಗುವುದು. ಸಾರ್ವಜನಿಕರು ಈ ಸೇವೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...