alex Certify ಚಲಿಸುತ್ತಿದ್ದ ರೈಲಿಂದ ಬಿದ್ದ ಮಗು ಸಾವು, ರಕ್ಷಿಸಲು ಜಿಗಿದ ತಂದೆಯೂ ದುರ್ಮರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಲಿಸುತ್ತಿದ್ದ ರೈಲಿಂದ ಬಿದ್ದ ಮಗು ಸಾವು, ರಕ್ಷಿಸಲು ಜಿಗಿದ ತಂದೆಯೂ ದುರ್ಮರಣ

ವಾರಣಾಸಿ: ಚಲಿಸುತ್ತಿದ್ದ ರೈಲಿನಿಂದ ಮೂರು ವರ್ಷದ ಮಗು ಬಿದ್ದಿದ್ದು, ಆಕೆಯ ತಂದೆ ಮಗುವನ್ನು ರಕ್ಷಿಸಲು ಹೊರಗೆ ಹಾರಿದ ಘಟನೆ ಭಾನುವಾರ ಇಲ್ಲಿನ ಮಿರ್ಜಾಮುರಾದ್ ಪೊಲೀಸ್ ವೃತ್ತದ ಬಹೇಡಾ ಹಾಲ್ಟ್ ಬಳಿ ನಡೆದಿದ್ದು, ಘಟನೆಯಲ್ಲಿ ಇಬ್ಬರೂ ಸಾವನ್ನಪ್ಪಿದ್ದಾರೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿಗಳ ಪ್ರಕಾರ, 32 ವರ್ಷದ ಹೀರಾ ರೈನ್ ತನ್ನ ಪತ್ನಿ ಜರೀನಾ, ಮಗಳು ಮತ್ತು ಸೋದರ ಮಾವ ಫಿರೋಜ್ ಅವರೊಂದಿಗೆ ದೆಹಲಿಯಿಂದ ಬಿಹಾರಕ್ಕೆ ಪ್ರಯಾಣಿಸುತ್ತಿದ್ದರು.

ರೈಲಿನಲ್ಲಿ ಕಿಕ್ಕಿರಿದು ತುಂಬಿದ್ದರಿಂದ ಸೀಟು ಸಿಗದ ಕಾರಣ ಮನೆಯವರು ಬಾಗಿಲ ಬಳಿಯೇ ಕುಳಿತಿದ್ದರು. ಮಗು ರೈಲಿನಿಂದ ಬಿದ್ದಾಗ, ಹೀರಾ ರೈನ್ ತಕ್ಷಣ ಅವಳನ್ನು ರಕ್ಷಿಸಲು ಹೊರಗೆ ಹಾರಿದ್ದಾರೆ. ಅವರ ಪತ್ನಿ ತಕ್ಷಣವೇ ರೈಲನ್ನು ನಿಲ್ಲಿಸಲು ತುರ್ತು ಸರಪಳಿ ಎಳೆದಿದ್ದಾರೆ.

ಸಹ ಪ್ರಯಾಣಿಕರು ಸಹಾಯಕ್ಕೆ ಬಂದರು. ಬಿದ್ದ ರಭಸಕ್ಕೆ ಮಗು ಸಾವನ್ನಪ್ಪಿದೆ. ಗಾಯಗೊಂಡಿದ್ದ ತಂದೆಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಅವರು ಮೃತಪಟ್ಟರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ಕುಟುಂಬದ ಸ್ಥಳೀಯ ಸಂಬಂಧಿಕರಿಗೆ ತಿಳಿಸಲಾಗಿದೆ ಎಂದು ಮಿರ್ಜಾಮುರಾದ್ ಇನ್ಸ್‌ ಪೆಕ್ಟರ್ ರಾಜೀವ್ ಸಿಂಗ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...