![](https://kannadadunia.com/wp-content/uploads/2021/11/2j46hlug_police-generic_625x300_27_October_18.jpg)
ಚಿಕ್ಕಮಗಳೂರು: ಸರ್ಕಾರದ ನಿಯಮ ಗಾಳಿಗೆ ತೂರಿ ಧಾರಾವಾಹಿ ಚಿತ್ರೀಕರಣ ನಡೆಸಲಾಗಿದೆ. ವೀಕೆಂಡ್ ಕರ್ಫ್ಯೂ ನಿಯಮವನ್ನು ಉಲ್ಲಂಘಿಸಿ ರಾಜಾರೋಷವಾಗಿ ಚಿತ್ರೀಕರಣ ನಡೆಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಫಲ್ಗುಣಿ ಗ್ರಾಮದ ಸಮೀಪ ಕೆಫೆಯಲ್ಲಿ ದಾರಾವಾಹಿ ಚಿತ್ರೀಕರಣ ನಡೆಸಲಾಗಿದೆ. ಮಾಹಿತಿ ತಿಳಿದು ಶೂಟಿಂಗ್ ಸ್ಥಳಕ್ಕೆ ಬಣಕಲ್ ಠಾಣೆ ಪೊಲೀಸರು ಭೇಟಿ ನೀಡಿದ್ದು. ಎಚ್ಚರಿಕೆ ನೀಡಿ, ಶೂಟಿಂಗ್ ಪ್ಯಾಕಪ್ ಮಾಡಿಸಿದ್ದಾರೆ.