alex Certify ಅಂತ್ಯಕ್ರಿಯೆಗೂ ಮಳೆ ಅಡ್ಡಿ: ಸ್ಮಶಾನ ಜಲಾವೃತ, ಎರಡು ದಿನ ಮನೆಯಲ್ಲೇ ಇತ್ತು ಶವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂತ್ಯಕ್ರಿಯೆಗೂ ಮಳೆ ಅಡ್ಡಿ: ಸ್ಮಶಾನ ಜಲಾವೃತ, ಎರಡು ದಿನ ಮನೆಯಲ್ಲೇ ಇತ್ತು ಶವ

ಚಿಕ್ಕಮಗಳೂರು: ನಿರಂತರವಾಗಿ ಧಾರಾಕಾರ ಮಳೆಯಾದ ಕಾರಣ ಅಂತ್ಯಸಂಸ್ಕಾರ ನೆರವೇರಿಸಲು ಸಾಧ್ಯವಾಗದೇ ಎರಡು ದಿನ ಮನೆಯಲ್ಲಿಯೇ ಮೃತದೇಹ ಇಟ್ಟುಕೊಂಡಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಎಸ್. ಬೊಮ್ಮನಹಳ್ಳಿಯಲ್ಲಿ ನಡೆದಿದೆ.

ಸೋಮವಾರ ಪ್ರಮೋದ್ ಎಂಬುವರು ಮೃತಪಟ್ಟಿದ್ದು, ತಗ್ಗು ಪ್ರದೇಶದಲ್ಲಿರುವ ಗ್ರಾಮದ ಸ್ಮಶಾನದಲ್ಲಿ ಮಳೆ ನೀರು ನಿಂತಿದೆ. ಇದರಿಂದಾಗಿ ಅಂತ್ಯಕ್ರಿಯೆ ನೆರವೇರಿಸಲು ಸಾಧ್ಯವಾಗಿಲ್ಲ. ಮಂಗಳವಾರ ಮಳೆ ಬಿಡುವು ನೀಡಿದ ನಂತರ ಸ್ಮಶಾನದ ನೀರು ಬೇರೆಡೆಗೆ ಹರಿದು ಹೋಗಲು ವ್ಯವಸ್ಥೆ ಮಾಡಲಾಗಿದೆ. ನಂತರ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...