
ಮೊಟ್ಟೆಗಳನ್ನು ಗುಳುಂ ಎಂದು ನುಂಗುವ ಆಸೆಯಿಂದ ಕೆರೆ ಹಾವೊಂದು ಕೋಳಿಯ ಫಾರ್ಮ್‍ಗೆ ನುಗ್ಗಿತ್ತು. ಆದರೆ, ಮೊಟ್ಟೆಗಳ ಮೇಲೆ ದೊಡ್ಡ ಕೋಳಿಯೊಂದು ಕೂತಿದ್ದರಿಂದ ಹಾವಿಗೆ ಸ್ವಲ್ಪ ಕಾಲ ಕಾಯುವುದೇ ಲೇಸು ಎನಿಸಿ, ಸಂದಿಯೊಂದರಲ್ಲಿ ಅಡಗಿ ಕುಳಿತುಕೊಳ್ಳಬೇಕಾಯಿತು.
ಅಷ್ಟರಲ್ಲಿ ಫಾರ್ಮ್ ಮಾಲೀಕರ ನಾಯಿಗೆ, ಹಾವಿನ ವಾಸನೆ ಸಿಕ್ಕು ಸಂದಿಯ ಬಳಿಗೆ ಬಂದು ಬೊಗಳಲಾರಂಭಿಸಿತು. ಮಾಲಕಿ ಕೂಡ ಫಾರ್ಮ್ ಒಳಗೆ ಧಾವಿಸಿ ಹಾವನ್ನು ಕಂಡು ಹೌಹಾರಿದಳು.
ಈ ವೇಳೆ ಮೊಟ್ಟೆಯ ಮೇಲಿಂದ ಎದ್ದ ಕೋಳಿಯು ಹಾವಿನ ಮೇಲೆ ಜಿಗಿದು ಕುಕ್ಕಲು ಆರಂಭಿಸಿತು. ಒಂದೆಡೆ ಬೊಗಳುವ ನಾಯಿ, ಚೀರಾಡುವ ಮಾಲಕಿ ಮತ್ತೊಂದೆಡೆ ಕುಕ್ಕುತ್ತಿರುವ ಕೋಳಿಯ ಕಾಟದಿಂದ ಬೇಸತ್ತ ಹಾವಿಗೆ ಹೊರಗೆ ಓಡುವುದೇ ಲೇಸು ಎಂದೆನಿಸಿತು.
‘ಅಕ್ಕಿನೇನಿ’ ಕೈಬಿಟ್ಟ ನಂತರ ವಿಚ್ಛೇದನ ವದಂತಿ ನಡುವೆ ‘ನಾಗ ಮಾವ’ನಿಗೆ ಶುಭ ಹಾರೈಸಿದ ಸಮಂತಾ
ಸರಸರನೆ ಓಡಿ ಫಾರ್ಮ್ ಹೊರಗಿನ ಬಿಲವನ್ನು ಸೇರಿಕೊಂಡಿತು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟ್ವಿಟರ್‍ನಲ್ಲಿ ವೈರಲ್‍ಹಾಗ್ ಹೆಸರಿನ ಖಾತೆಯಲ್ಲಿ ಕಾಣಬಹುದಾಗಿದೆ.