“ವಿವಿಧತೆಯಲ್ಲಿ ಐಕ್ಯತೆ ಹಾಗೂ ರಾಷ್ಟ್ರೀಯತೆ” ಸಂದೇಶ ಹೊತ್ತ ಛತ್ತೀಸ್‌ಘಡದ ಸುರ್ಜಾಪುರ ಜಿಲ್ಲೆಯ ಸೋಘಾಪುರ ಗ್ರಾಮದ ಯುವಕನೊಬ್ಬ ತನ್ನೂರಿನಿಂದ 1100 ಕಿಮೀ ದೂರ ಕಾಲ್ನಡಿಗೆಯಲ್ಲಿ ನವದೆಹಲಿಯತ್ತ ಹೊರಟಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿರನ್ನು ಭೇಟಿಯಾಗಲು ಹೊರಟಿರುವ ರಾಜೀವ್ ರಾಜ್ವಾಡೆ ಹೆಸರಿನ ಈತ ಆಗಸ್ಟ್ 10ರಂದು ತನ್ನ ಮನೆಯಿಂದ ತ್ರಿವರ್ಣ ಹಿಡಿದು ಪಯಣ ಆರಂಭಿಸಿದ್ದಾನೆ.
BIG BREAKING: ದಾಳಿ ಸಹಿಸಲ್ಲ, ಉಗ್ರರ ಕೊನೆಗಾಣಿಸುವ ಸಮಯ; ತಾಲಿಬಾನ್ ಗೆ ಅಮೆರಿಕ ವಾರ್ನಿಂಗ್
“ಛತ್ತೀಸ್‌ಘಡದ ಜನರ ಪರವಾಗಿ ಪ್ರಧಾನ ಮಂತ್ರಿಗೆ ಗ್ರೀಟ್ ಮಾಡಲು ಇಚ್ಛಿಸುತ್ತೇನೆ” ಎಂದು ತಮ್ಮ ಪಾದಯಾತ್ರೆ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ರಾಜೀವ್, “ಉಜ್ವಲಾ ಯೋಜನೆ, ಆಯುಷ್ಮಾನ್, ಕಿಸಾನ್ ಸಮ್ಮಾನ್‌ನಂಥ ಕೆಲಸಗಳಿಂದ ಛತ್ತೀಸ್‌ಘಡ ಸೇರಿದಂತೆ ದೇಶದೆಲ್ಲೆಡೆ ಇರುವ ಬಡವರಿಗೆ ಹಾಗೂ ಕೆಳವರ್ಗದ ಜನರಿಗೆ ಭಾರೀ ಅನುಕೂಲವಾಗಿದ್ದು, ಇದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ. ಮುಂದಿನ ಬಾರಿಯೂ ಸಹ ಅವರು ಪ್ರಧಾನ ಮಂತ್ರಿಯ ಸಾಮರ್ಥ್ಯದಲ್ಲಿ ದೇಶ ಸೇವೆ ಮಾಡಲಿ ಎಂದು ಹಾರೈಸುತ್ತೇನೆ” ಎಂದು ರಾಜೀವ್ ತಿಳಿಸಿದ್ದಾರೆ.
ಛತ್ತೀಸ್‌ಘಡದ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್, ಬಿಜೆಪಿ ಹಿರಿಯ ನಾಯಕ ಧರ್ಮಲಾಲ್ ಕೌಶಿಕರಿಂದ ಹಿಡಿದು ಜನಸಾಮಾನ್ಯರವರೆಗೂ ರಾಜೀವ್ ಸಾಗುತ್ತಿರುವ ಹಾದಿಯೆಲ್ಲೆಡೆ ಜನರಿಂದ ಭಾರೀ ಕರತಾಡನ ವ್ಯಕ್ತವಾಗುತ್ತಿದೆ.