ಅನ್ಯ ಪುರುಷನೊಂದಿಗೆ ಸಂಬಂಧ ಇಟ್ಟುಕೊಂಡಿರುವ ಶಂಕೆ ಮೇಲೆ ವ್ಯಕ್ತಿಯೊಬ್ಬ ತನ್ನ ಗರ್ಲ್‌ಫ್ರೆಂಡ್‌ಗೆ ಸ್ಕ್ರೂಡ್ರೈವರ್‌ನಲ್ಲಿ 51 ಬಾರಿ ಇರಿದು ಕೊಲೆಗೈದಿದ್ದಾನೆ. ಆಪಾದಿತನನ್ನು ಶಹಬಾಜ಼್ ಎಂದೂ ಸಂತ್ರಸ್ತೆಯನ್ನು ನೀಲಂ ಕುಸುಂ ಎಂದು ಗುರುತಿಸಲಾಗಿದೆ.
ಛತ್ತೀಸ್‌ಘಡದ ಕೋರ್ಬಾ ಜಿಲ್ಲೆಯ ನಿವಾಸಿಯಾದ ನೀಲಂ ಬಸ್ ಕಂಡಕ್ಟರ್ ಆಗಿದ್ದ ಶಹಬಾಜ಼್ ಜೊತೆಗೆ ಸ್ನೇಹ ಬೆಳೆಸಿಕೊಂಡಿದ್ದರು. ಹೊಸ ಕೆಲಸದ ಮೇಲೆ ಕೆಲ ದಿನಗಳ ಮಟ್ಟಿಗೆ ಶಹಬಾಜ಼್ ಗುಜರಾತ್‌ಗೆ ತೆರಳಿದ್ದರು. ಈ ವೇಳೆ ಇಬ್ಬರ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ. ಆದರೆ ಕಾಲ ಕಳೆದಂತೆ ಇಬ್ಬರು ಮತ್ತೆ ಕೂಡಿಕೊಂಡಿದ್ದರು.
ನೀಲಂಗೆ ಮತ್ತೊಬ್ಬ ಪುರುಷನೊಂದಿಗೆ ಅಫೇರ್ ಇದೆ ಎಂದು ಶಹಬಾಜ಼್‌ಗೆ ಅನುಮಾನ ಮೂಡಿದೆ. ಕಳೆದ ವರ್ಷದ ಕ್ರಿಸ್ಮಸ್ ಸಂದರ್ಭದಲ್ಲಿ ಗುಜರಾತ್‌ನಿಂದ ಕೊರ್ಬಾಗೆ ಆಗಮಿಸಿದ ಶಹಬಾಜ಼್ ನೀಲಂ ಮನೆಗೆ ತೆರಳಿದ್ದಾನೆ. ಆ ವೇಳೆ ರಜೆಯ ಬಿಡುವಿಗೆ ಸಜ್ಜಾಗುತ್ತಿದ್ದ ನೀಲಂ ಜೊತೆಗೆ ಶಹಬಾಜ಼್ ಜಗಳವಾಡಿಕೊಂಡಿದ್ದಾನೆ.
ಇದಾದ ಬೆನ್ನಿಗೆ ನೀಲಂ ಎದೆಗೆ 34 ಬಾರಿ ಚುಚ್ಚಿದ ಶಹಬಾಜ಼್, ಆಕೆಯ ಬೆನ್ನಿಗೆ 16 ಬಾರಿ ಚುಚ್ಚಿದ್ದಾನೆ. ಗುಜರಾತ್‌ನಿಂದ ಛತ್ತೀಸ್‌ಘಡಕ್ಕೆ ವಿಮಾನದಲ್ಲಿ ಆಗಮಿಸುವ ಬೋರ್ಡಿಂಗ್ ಪಾಸ್ ಅನ್ನು ನೀಲಂ ಮನೆಯಲ್ಲಿ ಬಿಟ್ಟಿದ್ದ ಶಹಬಾಜ಼್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ತಪ್ಪೊಪ್ಪಿಕೊಂಡಿದ್ದಾನೆ.