alex Certify ನಕ್ಸಲರ ದಾಳಿಯಲ್ಲಿ CRPF ಸಬ್ ಇನ್ಸ್ ಪೆಕ್ಟರ್ ಹುತಾತ್ಮ: ಕಾನ್ಸ್ ಟೇಬಲ್ ಗೆ ಗಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಕ್ಸಲರ ದಾಳಿಯಲ್ಲಿ CRPF ಸಬ್ ಇನ್ಸ್ ಪೆಕ್ಟರ್ ಹುತಾತ್ಮ: ಕಾನ್ಸ್ ಟೇಬಲ್ ಗೆ ಗಾಯ

ಛತ್ತೀಸ್‌ ಗಢದ ಸುಕ್ಮಾದಲ್ಲಿ ಭಾನುವಾರ ನಕ್ಸಲರೊಂದಿಗಿನ ಎನ್‌ ಕೌಂಟರ್‌ ನಲ್ಲಿ ಸೆಂಟ್ರಲ್ ಪೊಲೀಸ್ ರಿಸರ್ವ್ ಫೋರ್ಸ್(ಸಿಆರ್‌ಪಿಎಫ್) ನ ಸಬ್ ಇನ್ಸ್‌ ಪೆಕ್ಟರ್ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಕಾನ್‌ ಸ್ಟೆಬಲ್ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ಮಾಹಿತಿ ಪ್ರಕಾರ, ಸಿಆರ್‌ಪಿಎಫ್ 165 ನೇ ಬೆಟಾಲಿಯನ್‌ ನ ಸುಧಾಕರ್ ರೆಡ್ಡಿ ಮೃತ ಸಬ್ ಇನ್ಸ್‌ ಪೆಕ್ಟರ್ ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಕಾನ್‌ಸ್ಟೆಬಲ್ ರಾಮು ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆಗಾಗಿ ಹೆಲಿಕಾಪ್ಟರ್‌ ನಲ್ಲಿ ರವಾನಿಸಲಾಗಿದೆ.

ನಾಲ್ವರು ಶಂಕಿತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಸಿಆರ್‌ಪಿಎಫ್, ಕೋಬ್ರಾ ಮತ್ತು ಜಿಲ್ಲಾ ಪಡೆಗಳಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...