ಚೆಕ್ ಬೌನ್ಸ್ ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ಐದು ರಾಜ್ಯಗಳಲ್ಲಿ ನಿವೃತ್ತ ನ್ಯಾಯಾಧೀಶರನ್ನು ಹೊಂದಿರುವ ವಿಶೇಷ ನ್ಯಾಯಾಲಯಗಳ ಸ್ಥಾಪನೆಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್, ಬಿ. ಗವಾಯಿ ಮತ್ತು ಎಸ್ ರವೀಂದ್ರ ಭಟ್ ಅವರ ತ್ರಿಸದಸ್ಯ ಪೀಠವು ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ ಆಕ್ಟ್ ಅಡಿಯಲ್ಲಿ ವಿಶೇಷ ನ್ಯಾಯಾಲಯಗಳನ್ನು ಮಹಾರಾಷ್ಟ್ರ, ದೆಹಲಿ, ಗುಜರಾತ್, ಉತ್ತರ ಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಸ್ಥಾಪಿಸಲಾಗುವುದು ಎಂದು ಹೇಳಿದೆ.
ಪ್ಲೇಆಫ್ ಗೆ RCB: ಯಾರು ಸೋತು, ಯಾರು ಗೆಲ್ಲಬೇಕು…? ಹೀಗಿದೆ ಲೆಕ್ಕಾಚಾರ
ಈ ಪ್ರಾಯೋಗಿಕ ನ್ಯಾಯಾಲಯಗಳು ಸೆಪ್ಟೆಂಬರ್ 1, 2022 ರಿಂದ ಪ್ರಾರಂಭವಾಗಲಿದೆ. ಪ್ರಸ್ತುತ ಆದೇಶವನ್ನು ನೇರವಾಗಿ ಐದು ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಜನರಲ್‌ಗೆ ತಿಳಿಸಲಾಗಿದ್ದು, ತಕ್ಷಣದ ಕ್ರಮಕ್ಕಾಗಿ ಮುಖ್ಯ ನ್ಯಾಯಮೂರ್ತಿಗಳ ಮುಂದೆ ಅದನ್ನು ಇಡಬೇಕು ಎಂದು ಪೀಠ ಹೇಳಿದೆ.
ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ ಆಕ್ಟ್ ಕಾಯ್ದೆಯಡಿ ಪ್ರಕರಣಗಳು ಹೆಚ್ಚಿರುವ ಪ್ರತಿಯೊಂದು ರಾಜ್ಯಗಳಲ್ಲಿ ಐದು ಜಿಲ್ಲೆಗಳನ್ನು ಆಯ್ಕೆ ಮಾಡಬಹುದು ಮತ್ತು ಅಂತಹ ಪ್ರತಿ ಜಿಲ್ಲೆಯಲ್ಲಿ ಒಂದು ನ್ಯಾಯಾಲಯ ಸ್ಥಾಪಿಸಬಹುದು ಎಂಬ ಅಮಿಕಸ್ ಕ್ಯೂರಿಯ ಸಲಹೆಯನ್ನು ನ್ಯಾಯಾಲಯವು ಒಪ್ಪಿತು.
ಪ್ರಾಯೋಗಿಕವಾಗಿ ನಿವೃತ್ತ ನ್ಯಾಯಾಧೀಶರೊಂದಿಗೆ ಒಂದು ಜಿಲ್ಲೆಯಲ್ಲಿ ಒಂದು ನ್ಯಾಯಾಲಯ ಹೊಂದಲು ಅಮಿಕಸ್ ಸಲಹೆ ನೀಡಿತ್ತು.