alex Certify ಪ್ಲೇಆಫ್ ಗೆ RCB: ಯಾರು ಸೋತು, ಯಾರು ಗೆಲ್ಲಬೇಕು…? ಹೀಗಿದೆ ಲೆಕ್ಕಾಚಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ಲೇಆಫ್ ಗೆ RCB: ಯಾರು ಸೋತು, ಯಾರು ಗೆಲ್ಲಬೇಕು…? ಹೀಗಿದೆ ಲೆಕ್ಕಾಚಾರ

ಮುಂಬೈ: ಗುರುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟಾನ್ಸ್ ತಂಡವನ್ನು ಎಂಟು ವಿಕೆಟ್‌ಗಳಿಂದ ಮಣಿಸುವ ಮೂಲಕ ಬೃಹತ್ ಮೊತ್ತ ಚೇಸ್ ಮಾಡಿ ಸಾಧನೆ ಮಾಡಿದೆ.

ಈ ಗೆಲುವಿನೊಂದಿಗೆ ಆರ್.ಸಿ.ಬಿ. ಪ್ಲೇಆಫ್ ಭರವಸೆಯನ್ನು ಜೀವಂತವಾಗಿರಿಸಿಕೊಂಡಿರುವುದು ಮಾತ್ರವಲ್ಲದೆ, ಆತ್ಮವಿಶ್ವಾಸವೂ ಹೆಚ್ಚಿಸಿಕೊಂಡಿದೆ.

ಬೆಂಗಳೂರು ಈಗ 14 ಪಂದ್ಯಗಳಲ್ಲಿ 8 ಜಯ ಸಾಧಿಸಿ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ನಾಲ್ಕನೇ ಸ್ಥಾನದಲ್ಲಿದ್ದರೂ, RCB ಋಣಾತ್ಮಕ ರನ್ ರೇಟ್‌ನಿಂದಾಗಿ ಪ್ಲೇಆಫ್ ಗೆ ಪ್ರವೇಶಿಸಲು ಅನಿಶ್ಚಿತ ಸ್ಥಿತಿಯಲ್ಲಿದೆ. ಬೇರೆ ತಂಡಗಳಿಂದ ಅನುಕೂಲಕರ ಫಲಿತಾಂಶಗಳನ್ನು ನಿರೀಕ್ಷಿಸಬೇಕಾಗುತ್ತದೆ.

ಚೆನ್ನೈ ತನ್ನ ಮುಂದಿನ ಪಂದ್ಯದಲ್ಲಿ ರಾಜಸ್ಥಾನವನ್ನು ಭಾರಿ ಅಂತರದಿಂದ ಸೋಲಿಸಿದಲ್ಲಿ ಪಾಯಿಂಟ್‌ ಗಳ ಪಟ್ಟಿಯಲ್ಲಿ ಕೆಳಗಿಳಿಯಬಹುದು. ಆದರೆ ಈ ಪಂದ್ಯ ರಾಜಸ್ಥಾನ ಮತ್ತು ಬೆಂಗಳೂರಿನ ಭವಿಷ್ಯವನ್ನು ನಿರ್ಧರಿಸಬಹುದಾದ್ದರಿಂದ ಎಲ್ಲರ ಕಣ್ಣುಗಳು ಮುಂಬೈ ವಿರುದ್ಧ ದೆಹಲಿ ಪಂದ್ಯದ ಮೇಲಿದೆ.

ಸಂಜು ಸ್ಯಾಮ್ಸನ್ ನೇತೃತ್ವದ ತಂಡವು ತಮ್ಮ ಕೊನೆಯ ರೌಂಡ್-ರಾಬಿನ್ ಪಂದ್ಯದಲ್ಲಿ ಚೆನ್ನೈ ವಿರುದ್ಧ ಸೋತರೆ ಮತ್ತು ಡೆಲ್ಲಿ ಮುಂಬೈ ವಿರುದ್ಧ ಸೋತರೆ. ಅಂತಹ ಸನ್ನಿವೇಶದಲ್ಲಿ, RCB ಮತ್ತು RR ಎರಡೂ ತಲಾ 16 ಅಂಕಗಳೊಂದಿಗೆ ಪ್ಲೇಆಫ್‌ಗೆ ಅರ್ಹತೆ ಪಡೆಯುತ್ತವೆ, DC ತಂಡವನ್ನು 14 ಅಂಕಗಳೊಂದಿಗೆ ಬಿಟ್ಟುಬಿಡುತ್ತವೆ.

ಮತ್ತೊಂದೆಡೆ, ದೆಹಲಿಯು ಮುಂಬೈಯನ್ನು ಸೋಲಿಸಿದರೆ ಮತ್ತು ರಾಜಸ್ಥಾನವು ಚೆನ್ನೈಗೆ ಸೋತರೆ, ಬೆಂಗಳೂರಿನ ಅವಕಾಶ ಕೈತಪ್ಪುತ್ತದೆ. ಅದು ನಕಾರಾತ್ಮಕ ರನ್-ರೇಟ್‌ನಿಂದಾಗಿ ಅರ್ಹತೆ ಪಡೆಯಲು ಸಾಧ್ಯವಾಗುವುದಿಲ್ಲ. ದೆಹಲಿ ಮತ್ತು ರಾಜಸ್ಥಾನ ಎರಡೂ ಬೆಂಗಳೂರಿಗಿಂತ ಹೆಚ್ಚು NRR ಹೊಂದಿವೆ. DC ಮತ್ತು RR ಆಯಾ ಪಂದ್ಯಗಳನ್ನು ಗೆದ್ದರೆ, RCB IPL 2022 ರಿಂದ ಹೊರಬೀಳುತ್ತದೆ ಎನ್ನುವ ಲೆಕ್ಕಾಚಾರಗಳು ನಡೆದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...