ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಹಾಗೂ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರ ಬಳಿ ಚಾಲ್ತಿಯಲ್ಲಿರುವ ಚೆಕ್ ಪುಸ್ತಕಗಳು ಅಕ್ಟೋಬರ್ 1ರಿಂದ ನಿಷ್ಕ್ರಿಯಗೊಳ್ಳಲಿವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಈ ಚೆಕ್ ಪುಸ್ತಕಗಳನ್ನು ಮೇಲ್ಕಂಡ ದಿನಾಂಕದಿಂದ ನಿಷ್ಕ್ರಿಯಗೊಳಿಸಲಿದೆ.
ಈ ಹಳೆಯ ಚೆಕ್ ಪುಸ್ತಕಗಳ ಬದಲಿಗೆ ಪಿಎನ್‌ಬಿ ಹೆಸರಿನ ಹೊಸ ಚೆಕ್ ಪುಸ್ತಕಗಳನ್ನು, ಪಿಎನ್‌ಬಿಯ ಐಎಫ್‌ಎಸ್‌ಸಿ ಕೋಡ್ ಹಾಗೂ ಎಂಐಸಿಆರ್‌ನೊಂದಿಗೆ ಪಡೆದುಕೊಳ್ಳಲು ಗ್ರಾಹಕರನ್ನು ಕೋರಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಟ್ವೀಟ್ ಮಾಡಿದೆ.
ಹೊಸ ಚೆಕ್ ಬುಕ್‌ಗಾಗಿ ಹತ್ತಿರದ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿ ಅಥವಾ ಎಟಿಎಂ,/ಐಬಿಎಸ್/ಪಿಎನ್‌ಬಿ ಒನ್ ಮೂಲಕ ಅರ್ಜಿ ಸಲ್ಲಿಸಿ ಎಂದು ತಿಳಿಸಿರುವ ಪಿನ್‌ಬಿ, ಈ ಬಗ್ಗೆ ಯಾವುದೇ ಹೆಚ್ಚಿನ ವಿವರಗಳಿಗಾಗಿ ತನ್ನ ಶುಲ್ಕ ರಹಿತ ಸಂಖ್ಯೆ 1800-180-2222ಗೆ ಕರೆ ಮಾಡಲು ತಿಳಿಸಿದೆ.
ಸಂಬಳ ಸಿಗದ್ದಕ್ಕೆ ಬೇಸತ್ತು ಅತಿಥಿ ಉಪನ್ಯಾಸಕ ಆತ್ಮಹತ್ಯೆ
ಪಂಜಾಬ್ ನ್ಯಾಷನಲ್ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಹಾಗೂ ಓರಿಯಂಟಲ್ ಬ್ಯಾಂಕ್‌ಗಳ ವಿಲೀನವನ್ನು 2019ರ ಆಗಸ್ಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು. ಈ ಮೂರೂ ಬ್ಯಾಂಕ್‌ಗಳ ವಿಲೀನದಿಂದಾಗಿ ಒಟ್ಟಾರೆ ವಹಿವಾಟು 17.95 ಲಕ್ಷ ಕೋಟಿ ರೂ.ಗಳಷ್ಟಿತ್ತು.
ಭವಿಷ್ಯದಲ್ಲಿ ವಹಿವಾಟಿಗೆ ಯಾವುದೇ ತೊಂದರೆಯಾಗದಿರಲು ಮೈಗ್ರೇಷನ್ ಪ್ರಕ್ರಿಯೆಯ ಭಾಗವಾಗಿ ಈ ಬ್ಯಾಂಕ್‌ಗಳ ಗ್ರಾಹಕರೀಗ ಹೊಸ ಚೆಕ್ ಪುಸ್ತಗಳನ್ನು ಪಡೆಯಬೇಕಾಗಿದೆ.